Thursday, September 19, 2024

ಪ್ರಾಯೋಗಿಕ ಆವೃತ್ತಿ

ಏರೋಬಿಕ್ಸ್ ಹಿಪ್‌ಹಾಪ್‌ ಕ್ರೀಡಾ ಚಾಂಪಿಯನ್‌ಶಿಪ್‌: ಕರ್ನಾಟಕ ಪ್ರಥಮ

ಮಂಡ್ಯದಲ್ಲಿ ನಡೆದ ಮೂರು ದಿನಗಳ ಕಾಲ ನಡೆದ 18ನೇ ರಾಷ್ಟ್ರೀಯ ಮಟ್ಟದ ಏರೋಬಿಕ್ಸ್ ಹಿಪ್‌ಹಾಪ್‌ ಕ್ರೀಡಾ ಚಾಂಪಿಯನ್‌ಶಿಪ್‌ ನಲ್ಲಿ ಪ್ರಥಮ ಬಹುಮಾನವನ್ನು ಕರ್ನಾಟಕ ತನ್ನದಾಗಿಸಿಕೊಂಡಿತು. ಎರಡನೇ ಬಹುಮಾನವನ್ನು ಮಹಾರಾಷ್ಟ್ರ, ಮೂರನೇ ಬಹುಮಾನವನ್ನು ಗೋವಾ, ನಾಲ್ಕನೇ ಬಹುಮಾನವನ್ನು ತಮಿಳುನಾಡು ತಂಡ ಬಹುಮಾನ ಪಡೆದುಕೊಂಡವು.

ಮಂಡ್ಯ ನಗರದ ಪಿಇಎಸ್ ಇಂಜಿನಿಯರ್ ಕಾಲೇಜಿನ ಎಚ್‌.ಡಿ.ಚೌಡಯ್ಯ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಮಾರಂಭದಲ್ಲಿ ಏರೋಬಿಕ್ಸ್‌ ಹಿಪ್‌ಹಾಪ್‌ ಕ್ರೀಡಾ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಶುಭರಾಣಿ ಮಾತನಾಡಿ, ಸ್ಪರ್ಧಿಗಳು ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ, ಗೆಲುವು ಸೋಲು ಎಂಬುದು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವಾಗಿದೆ, ಈ ಮೂರು ದಿನಗಳಲ್ಲಿ ಗೋವಾ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್‌, ದೆಹಲಿ ಸೇರಿದಂತೆ ನಾನಾ ರಾಜ್ಯಗಳಿಂದ 400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಗಮನ ಸೆಳೆದಿದ್ದಾರೆ ಎಂದು ಶ್ಲಾಘಿಸಿದರು.

ಎಂಟು ವರ್ಷದಿಂದ 24 ವರ್ಷದವರೆಗಿನ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ, ಆಯಾ ವಿಭಾಗದಲ್ಲಿ ಭಾಗವಹಿಸಿದ್ದಾರೆ, ಜೊತೆಗೆ ಸೀನಿಯರ್‌ ಕ್ಯಾಟಗಿರಿಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ ಎಂದರು.

ಏರೋಬಿಕ್ಸ್‌ ಹಿಪ್‌ಹಾಪ್‌ ರಾಷ್ಟ್ರೀಯ ಫೆಡರೇಷನ್‌ ಅಧ್ಯಕ್ಷ ಸಂತೋಷ್‌ ದೇಶ್‌ಮುಖ್‌, ಕಾರ್ಯದರ್ಶಿ ಸಂತೋಷ್‌ ಕೈರ್‌ನಾರ್‌ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!