ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಇಂದು ದಸಂಸ ಒಕ್ಕೂಟದಿಂದ ನಡೆಯುತ್ತಿರುವ ಅಂಬೇಡ್ಕರ್ ಹಬ್ಬ ಹಾಗೂ ದಲಿತರ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕ್ರಾಂತಿ ಗೀತೆಗಳ ಕಹಳೆ ಮೊಳಗುತ್ತಿದ್ದರೆ ಜನರ ನರ-ನಾಡಿಗಳಲ್ಲಿ ಮಿಂಚಿನ ಸಂಚಾರವಾಗುತ್ತಿತ್ತು. ದಲಿತ-ದಮನಿತರ ಶೋಷಣೆಯ ಹಾಡುಗಳನ್ನು ಹಾಡುತ್ತಿದ್ದಾಗ ಕ್ರೂರ ವ್ಯವಸ್ಥೆ ಬಗ್ಗೆ ಅಸಹನೆ ಹೆಚ್ಚಾಗುತ್ತಿತ್ತು.
ವಿವಿಧ ಗಾಯಕರು ಒಂದಾದ ಮೇಲೊಂದರಂತೆ ಹಾಡಿದ ಹೋರಾಟದ ಹಾಡುಗಳು ನೆರೆದಿದ್ದ ಜನರನ್ನು ರಂಜಿಸಿತು.
ಮೈಸೂರು ರಂಗಾಯಣ ಮಾಜಿ ನಿರ್ದೇಶಕ, ಗಾಯಕ ಜರ್ನಾರ್ಧನ್ (ಜನ್ನಿ) ಹಾಗೂ ಸಂಗಡಿಗರು ಕ್ರಾಂತಿ ಗೀತೆ ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಬಡಿದೆಬ್ಬಿಸಿದರು.
ಇದನ್ನು ಓದಿ:ಕಾರ್ಮಿಕರಿಗೆ ಗೌರವ ಸಮರ್ಪಣೆ
ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ಹೆಚ್.ಎಸ್.ನಾಗಮೋಹನದಾಸ್, ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್ ಸೇರಿದಂತೆ ಹಲವರಿದ್ದರು.