Wednesday, July 24, 2024

ಪ್ರಾಯೋಗಿಕ ಆವೃತ್ತಿ

ಕಾರ್ಮಿಕರಿಗೆ ಗೌರವ ಸಮರ್ಪಣೆ

ಕಾರ್ಮಿಕ ದಿನಾಚರಣೆಯ ಅಂಗವಾಗಿ ವಿವಿಧ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕ ಬಂಧುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಪಾಂಡವಪುರ ಪಟ್ಟಣದ ಮಾಮು ಟೀ ಅಂಗಡಿ ಮುಂಭಾಗ, ಗ್ರಾಮರಂಗ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ಶ್ರಮಿಕರಾದ ಪುರಸಭೆ ಪೌರ ಕಾರ್ಮಿಕ ಗಣೇಶ್, ಆನಂದ್, ಕುಮಾರ್ ಹಾಗೂ ಆಟೋ ಚಾಲಕ ಜಲೇಂದ್ರ ಅವರನ್ನು ಪೊಲೀಸ್ ಇನ್ಸ್ ಪೆಕ್ಟರ್ ಕೆ.ಪ್ರಭಾಕರ್ ,ಕ.ಸಾ.ಪ ಅಧ್ಯಕ್ಷ ಮೇನಾಗರ ಪ್ರಕಾಶ್ ಸನ್ಮಾನಿಸಿದರು.

ನಂಜುಂಡಸ್ವಾಮಿ, ಪುರಸಭೆ ಸದಸ್ಯರಾದ ಬಾಬು, ಪಾರ್ಥಸಾರಥಿ ನೇತೃತ್ವದಲ್ಲಿ ಕ.ಸಾ.ಪ ಪದಾಧಿಕಾರಿಗಳು, ಮಾಮು ಟೀ ಅಂಗಡಿ ಮಾಲೀಕ ಮಾಮು ಸುಸೈರಾಜ್ ಸಹಕಾರದೊಂದಿಗೆ ಆತ್ಮೀಯವಾಗಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹರಳಹಳ್ಳಿ ಅಂಬಿ ಸುಬ್ಬಣ್ಣ, ಕ.ಸಾ.ಪ ಪಟ್ಟಣ ಘಟಕ ಅಧ್ಯಕ್ಷ ಬೀರಶೆಟ್ಟಹಳ್ಳಿ ಕುಮಾರ್, ಸಂಚಾಲಕ ಭರತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಇದನ್ನು ಓದಿ: ಅಂಬೇಡ್ಕರ್ ಹಬ್ಬದಲ್ಲಿ ಗಾಯಕ ಜನ್ನಿ ಅದ್ಭುತ ಗಾಯನ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!