Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ಮೀಸಲಾತಿ, ಒಬಿಸಿ- ಮುಸ್ಲಿಂ ವಿರೋಧಿ: ಅಸಾದುದ್ದೀನ್ ಓವೈಸಿ

ಮಹಿಳಾ ಮೀಸಲಾತಿ ಮಸೂದೆಗೆ ಎಐಎಂಐಎಂನ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ವಿರೋಧವನ್ನು ವ್ಯಕ್ತಪಡಿಸಿದ್ದು, ಇದು ಒಬಿಸಿ ವಿರೋಧಿ ಮತ್ತು ಮುಸ್ಲಿಂ ವಿರೋಧಿ ಮಸೂದೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಕೇಂದ್ರವು ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾತನಾಡಿದ  ಸಂಸದತ ಅಸಾದುದ್ದೀನ್ ಓವೈಸಿ, ಮಸೂದೆ ಭಾರತದ ಮುಸ್ಲಿಮರ ವಿರುದ್ಧವಾಗಿದೆ. ಇದು ಮುಸ್ಲಿಂ ಸಮುದಾಯಕ್ಕೆ ವಂಚನೆ ಮಾಡುತ್ತದೆ ಎಂದು ಹೇಳಿದ್ದಾರೆ.

ಮೋದಿ ಸರ್ಕಾರವು ಸವರ್ಣಿಯ ಮಹಿಳೆಯರಿಗೆ ಮಾತ್ರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಬಯಸಿದೆ. ಈ ಮಸೂದೆಯು ಒಬಿಸಿ ಮತ್ತು ಮುಸ್ಲಿಂ ಮಹಿಳೆಯರ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮಹಿಳಾ ವಂಚನೆ ಮಸೂದೆ, ಒಬಿಸಿ ವಿರೋಧಿ, ಮುಸ್ಲಿಂ ವಿರೋಧಿ ಮಸೂದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ನಾರಿ ಶಕ್ತಿ ವಂದನ್ ಅಧಿನಿಯಂ (ಮಹಿಳಾ ಮೀಸಲಾತಿ ಮಸೂದೆ) ಮುಸ್ಲಿಂ ಮತ್ತು ಒಬಿಸಿ ಸಮುದಾಯದ ಮಹಿಳೆಯರ ಕೋಟಾವನ್ನು ಒಳಗೊಂಡಿಲ್ಲವಾದ್ದರಿಂದ ತಾನು ಮಸೂದೆಯನ್ನು ವಿರೋಧಿಸುತ್ತೇನೆ ಎಂದು ಓವೈಸಿ ನಿನ್ನೆ ಮಸೂದೆಗೆ ತನ್ನ ವಿರೋಧವನ್ನು ವ್ಯಕ್ತಪಡಿಸಿದ್ದರು.

ನೀವು ಯಾರಿಗೆ ಪ್ರಾತಿನಿಧ್ಯ ನೀಡುತ್ತಿದ್ದೀರಿ? ಪ್ರಾತಿನಿಧ್ಯ ಇಲ್ಲದವರಿಗೆ ಪ್ರಾತಿನಿಧ್ಯ ನೀಡಬೇಕು. ಈ ಮಸೂದೆಯಲ್ಲಿನ ಪ್ರಮುಖ ದೋಷವೆಂದರೆ ಮುಸ್ಲಿಂ ಮತ್ತು ಒಬಿಸಿ ಸಮುದಾಯದ ಮಹಿಳೆಯರಿಗೆ ಯಾವುದೇ ಕೋಟಾ ಇಲ್ಲ, ಆದ್ದರಿಂದ ನಾವು ಇದನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇದುವರೆಗೆ 17 ಲೋಕಸಭಾ ಚುನಾವಣೆಗಳು ನಡೆದಿದ್ದು, 8,992 ಸಂಸದರು ಆಯ್ಕೆಯಾಗಿದ್ದಾರೆ. ಈ ಪೈಕಿ ಕೇವಲ 520 ಮುಸ್ಲಿಮರು ಮತ್ತು ಇದರಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರೂ ಇಲ್ಲ ಎಂದು ಒವೈಸಿ ಹೇಳಿದ್ದಾರೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ನಿನ್ನೆ ಹೊಸ ಸಂಸತ್ತಿನ ಕಟ್ಟಡದಲ್ಲಿ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದರು. ಇದಕ್ಕೆ ಕಾಂಗ್ರೆಸ್ ಸಂಪೂರ್ಣವಾದಂಹ ಬೆಂಬಲವನ್ನು ನೀಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!