Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಆಹಾರ ಆಯೋಗದ ಅಧ್ಯಕ್ಷರಿಂದ ಹೋಟೇಲ್ ಗಳ ಮೇಲೆ ದಾಳಿ : ದಂಡ

ರಾಜ್ಯ ಆಹಾರ ಅಯೋಗದ ಅಧ್ಯಕ್ಷ ಡಾ. ಹೆಚ್. ಕೃಷ್ಣ ಅವರು ಶುಕ್ರವಾರ ಮಂಡ್ಯನಗರದ ವಿವಿಧ ಹೋಟೇಲ್ ಗಳ ಮೇಲೆ ದಾಳಿ ದಿಢೀರ್ ದಾಳಿ ನಡೆಸಿ ಸ್ವಚ್ಛತೆ, ಆಹಾರದ ಸಂರಕ್ಷತೆ ಬಗ್ಗೆ ಪರಿಶೀಲಿಸಿ, ನಿಯಮ ಉಲ್ಲಂಘಿಸಿದ ಹೋಟೇಲ್ ಗಳಿಗೆ ದಂಡ ವಿಧಿಸಿದರು.

ಮಂಡ್ಯನಗರದ ಹೊಳಲು ವೃತ್ತದ ಗಾಯತ್ರಿ ಭವನ್, ಸಿಲ್ವರ್ ಜೂಬಿಲಿ ಪಾರ್ಕ್ ಎದರುಗಡೆ ಇರುವ ನ್ಯೂ ಗ್ರೀನ್ ಪ್ಯಾಲೇಸ್, ಪಶ್ವಿಮ ಪೋಲಿಸ್ ಠಾಣೆ ಬಳಿ ಇರುವ ನ್ಯೂ ಪಟೇಲ್ ಹೋಟೇಲ್ ಹಾಗೂ ಕರಾವಳಿ ಹೋಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗಾಯತ್ರಿ ಹೋಟೆಲ್ ನಲ್ಲಿ ಬಳಸುವ ಆಹಾರ ಪದಾರ್ಥಗಳಲ್ಲಿ ಹುಳುಗಳು ಇರುವುದನ್ನು ಕಂಡು ನೋಟಿಸ್ ಜಾರಿ ಮಾಡಿದರು, ಅಲ್ಲದೇ ಎರಡು ಸಾವಿರ ರೂ. ಗಳನ್ನ ದಂಡ ವಿಧಿಸಿದರು. ನ್ಯೂ ಗ್ರೀನ್ ಪ್ಯಾಲೇಸ್ ಡಾಬಾಕ್ಕೆ ತೆರಳಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ದಿಗ್ಭ್ರಂತರಾಗಿ ಎರಡು ಸಾವಿರ ದಂಡ ವಿಧಿಸುವುದರೊಂದಿಗೆ ಹಾಗೂ ಹೋಟೇಲ್ ಬೀಗ ಹಾಕಿಸಿದರು.

ನ್ಯೂ ಪಟೇಲ್, ಕರಾವಳಿ ಹೋಟೇಲ್ ಗೆ ಭೇಟಿ ನೀಡಿ  ಆಹಾರಕ್ಕೆ ಕೃತಕ ಬಣ್ಣ ಹಾಗೂ ಟೆಸ್ಟಿಂಗ್ ಪೌಡರ್ ಹಾಕುತ್ತಿರುವುದು ಕಂಡು ಅವರಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸಿದರು. ಈ ನಾಲ್ಕು ಹೋಟೆಲ್ ಗಳಿಗೆ ನಗರಸಭೆ ನೀಡುವ ಪರವಾನಿಗೆಯನ್ನು ರಿನಿವಲ್ ಮಾಡಸದಿರುವುದು ಗಮನಕ್ಕೆ ಬಂದ ಕೂಡಲೇ ನೋಟಿಸ್ ಜಾರಿ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ