Friday, September 20, 2024

ಪ್ರಾಯೋಗಿಕ ಆವೃತ್ತಿ

ಸರ್ವಾಧಿಕಾರಿ ಸರ್ಕಾರ; ರೈತರು, ನಿರುದ್ಯೋಗಿಗಳು, ಮಹಿಳೆಯರ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ: ಯುವತಿ ನೀಲಂ ಹೇಳಿಕೆ

“ಈ ಸರ್ಕಾರ ಸರ್ವಾಧಿಕಾರಿಯಾಗಿದ್ದು ನಮ್ಮ ಮಾತು ಕೇಳುತ್ತಿಲ್ಲ. ನಿರುದ್ಯೋಗಿಗಳಾಗಿದ್ದೇವೆ. ಅದಕ್ಕಾಗಿಯೇ ನಾವು ಈ ಮಾರ್ಗವನ್ನು ಆರಿಸಿಕೊಂಡಿದ್ದೇವೆ” ಹೀಗಂತ ಹೇಳಿದ್ದು ಲೋಕಸಭೆಯಲ್ಲಿಂದು ದಾಳಿಯ ಗುಂಪಿನಲ್ಲಿದ್ದ ಯುವತಿ ನೀಲಂ.

ಲೋಕಸಭೆಯಲ್ಲಿ ಇಂದು ಬುಧವಾರ ಭಾರೀ ಭದ್ರತಾ ಲೋಪದ ಘಟನೆಯ ಬಳಿಕ ಸಂಸತ್‌ನ ಹೊರಗಡೆ ‘ಕೆಮಿಕಲ್ ಬಾಂಬ್’ ಸಿಡಿಸಿದ ಬಳಿಕ ಪೊಲೀಸರ ವಶಕ್ಕೆ ಪಡೆಯುತ್ತಿದ್ದಾಗ ಯುವತಿ ನೀಲಂ ಈ ರೀತಿ ಹೇಳಿಕೆ ನೀಡಿದ್ದಾರೆ.

“ನನ್ನ ಹೆಸರು ನೀಲಂ, ನಾನು ನಿರುದ್ಯೋಗಿ. ಈ ಸರ್ಕಾರ ಸರ್ವಾಧಿಕಾರಿಯಾಗಿದ್ದು ನಮ್ಮ ಮಾತು ಕೇಳುತ್ತಿಲ್ಲ. ನಮ್ಮ ಹಕ್ಕುಗಳನ್ನು ಕೇಳಿದರೆ ಲಾಠಿ ಚಾರ್ಜ್‌ ನಡೆಸಿ ಬಂಧಿಸಲಾಗುತ್ತಿದೆ. ರಸ್ತೆಯಲ್ಲೇ ದೊಣ್ಣೆಯಿಂದ ಹೊಡೆಯುತ್ತಾರೆ. ನಮಗೆ ಬೇರೆ ದಾರಿ ಕಾಣಲಿಲ್ಲ. ಅದಕ್ಕಾಗಿಯೇ ನಾವು ಈ ಮಾರ್ಗವನ್ನು ಆರಿಸಿಕೊಂಡೆವು” ಎಂದು ತಿಳಿಸಿದ್ದಾಳೆ.

“>

“ನಾವು ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ. ನಾವು ವಿದ್ಯಾರ್ಥಿಗಳು, ಸಾಮಾನ್ಯ ಜನರು. ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಸರ್ಕಾರವು ರೈತರು, ಬಡವರು ಸೇರಿದಂತೆ ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದ್ದರೂ ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ. ದೇಶದಲ್ಲಿ ಸರ್ವಾಧಿಕಾರ ನಡೆಯಲು ನಾವು ಬಿಡಲ್ಲ. ಸರ್ವಾಧಿಕಾರಿ ಆಡಳಿತ ನಿಲ್ಲಿಸಿ. ಭಾರತ್ ಮಾತಾ ಕೀ ಜೈ,” ಎಂದು ನೀಲಂ ತಿಳಿಸಿದ್ದಾರೆ.

ಹಳದಿ ಹಾಗೂ ಕೆಂಪು ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಬಳಸಿ ಸಂಸತ್ತಿನ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ನೀಲಂ ಸಹಿತ ಇಬ್ಬರನ್ನು ವಶಕ್ಕೆ ಪಡಯಲಾಗಿದೆ. ಈವರೆಗೆ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸಂಸತ್ತಿನ ಹೊರಗಡೆ ನೀಲಂ (42) ಹರಿಯಾಣ ಹಿಸ್ಸಾರ್ ಮೂಲದವರೆಂದು ತಿಳಿದುಬಂದಿದೆ. ಮತ್ತೋರ್ವ ಅಮೋಲ್ ಶಿಂಧೆ (25) ಮಹಾರಾಷ್ಟ್ರ ಮೂಲದವರೆಂದು ಗುರುತಿಸಲಾಗಿದೆ. ಮತ್ತಿಬ್ಬರ ಪೈಕಿ ಓರ್ವ ಮೈಸೂರು ಮೂಲದ ಮನೋರಂಜನ್, ಇನ್ನೋರ್ವ ಸಾಗರ್ ಶರ್ಮಾ ಎಂದು ತಿಳಿದುಬಂದಿದೆ.

ಒಳಗಡೆ ದಾಳಿ ನಡೆಸಿದವರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದರು ಎಂದು ಉತ್ತರ ಪ್ರದೇಶದ ಅಮ್ರೋಹ ಶಾಸಕ ಡ್ಯಾನಿಶ್ ಅಲಿ ಮಾಹಿತಿ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!