Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಶಾಲಾ ಮಕ್ಕಳಿಗೆ ಡೆಂಗೀ ಕುರಿತು ಅರಿವು ಕಾರ್ಯಕ್ರಮ

ಪ್ರತಿಯೊಬ್ಬರೂ ಸೊಳ್ಳೆಯ ಜೀವನ ಚಕ್ರ ತಿಳಿದುಕೊಂಡು ಸೊಳ್ಳೆಗಳ ಉತ್ಪತ್ತಿ ತಾಣಗಳ ಬಗ್ಗೆ ಜಾಗೃತಿ ವಹಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಆಲಗೂಡು ಗ್ರಾಮದ ವಿಜಯ ಶಿಕ್ಷಣ ವಿದ್ಯಾಸಂಸ್ಥೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಡೆಂಗೀ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಅರಿವಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಡೆಂಗೀ ಹಾಗೂ ಚಿಕೂನ್ ಗುನ್ಯಾ ಜ್ವರಗಳು ಸೋಂಕು ಹೊಂದಿದ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯ ಕಡಿತದಿಂದ ಬರುತ್ತವೆ. ನಿಂತ ಸ್ವಚ್ಚ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತವೆ ಕಾರಣ ಸೊಳ್ಳೆ ಕಚ್ಚುವಿಕೆಯಿಂದ ಜಾಗೃತರಾಗಿರಬೇಕು.

ನಿರ್ದಿಷ್ಟ ಚಿಕಿತ್ಸೆ ಇಲ್ಲದ ಈ ಖಾಯಿಲೆಗೆ ಮುಂಜಾಗ್ರತೆಯೆ ಪರಮೌಷಧಿ ಆಗಿದ್ದು. ಹಠಾತ್ತನೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಬಾದಲ್ಲಿ ತೀವ್ರತರ ನೋವು, ವಾಕರಿಕೆ ಮತ್ತು ವಾಂತಿ ರೊಗದ ಲಕ್ಷಣಗಳಾಗಿವೆ.

ರೋಗದ ಲಕ್ಷಣ ಕಂಡಾಗ ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಿಸಿಕೊಳ್ಳಿ ಜೊತೆಗೆ ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಒಡೆದ ಟೈರುಗಳು, ತೆಂಗಿನ ಚಿಪ್ಪುಗಳು, ಸಿಮೆಂಟ್ ತೊಟ್ಟಿಗಳು, ತೆರೆದ ಪ್ಲಾಸ್ಟಿಕ್ ವಸ್ತುಗಳು, ನೀರಿನ ಸಂಗ್ರಹಣ ತೊಟ್ಟಿ, ಹೂವಿನ ಕುಂಡಗಳು, ಏರಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತವೆ ಇಂಥವುಗಳನ್ನು ವಾರಕ್ಕೊಂದು ಬಾರಿ ಲಕ್ಷವಹಿಸಿ ಸೊಳ್ಳೆಗಳು ಉತ್ಪತ್ತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಗಳು ಕಚ್ಚದಂತೆ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು, ಒಟ್ಟಾರೆ ನೀರು ನಿಲ್ಲದಂತೆ ಸಹಕರಿಸಿ, ಸೊಳ್ಳೆ ಉತ್ಪತ್ತಿ ತಡೆಗಟ್ಟಿ ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಸೊಳ್ಳೆ ಮರಿಗಳ ಪ್ರಾತ್ಯಕ್ಷಿಕೆಯೊಂದಿಗೆ ಸೊಳ್ಳೆಗಳ ಬೆಳವಣಿಗೆ ಹಂತಗಳ ಬಗ್ಗೆ ಹಾಗೂ ಭಿತ್ತಿ ಪತ್ರಗಳೊಂದಿಗೆ ಜಾಗೃತಿ ಮೂಡಿಸಿ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವೇಳೆ ಶಾಲೆಯ ಸಂಸ್ಥಾಪಕ ಮಾಯಿಗೌಡ, ಮುಖ್ಯ ಶಿಕ್ಷಕಿ ಗಾಯತ್ರಿ, ಸಹ ಶಿಕ್ಷಕರಾದ ಕೋಮಲ ಎನ್, ವರಮಹಾಲಕ್ಷ್ಮಿ, ಕಾವ್ಯ, ಶಿವಮ್ಮ, ಪುಷ್ಪ, ದೀಪಕ, ವಿದ್ಯಾ, ಆಶಾ ಕಾರ್ಯಕರ್ತೆ ಶಶಿಕಲಾ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!