Saturday, November 21, 2026

ಪ್ರಾಯೋಗಿಕ ಆವೃತ್ತಿ

ದೇಶದಲ್ಲಿ ರೈತ ಚಳವಳಿ ಕುಗ್ಗಿಲ್ಲ, ಮತ್ತೇ ಗಟ್ಟಿಯಾಗುತ್ತಿದೆ ; ಬಡಗಲಪುರ ನಾಗೇಂದ್ರ

ದೇಶದಾದ್ಯಂತ ರೈತ, ದಲಿತ, ಕಾರ್ಮಿಕ ಚಳವಳಿಗಳು ಕುಗ್ಗಿಲ್ಲ ಬದಲಾಗಿ ಇನ್ನಷ್ಟು ಗಟ್ಟಿಯಾಗುತ್ತಿವೆ ಎಂದು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಇಂದು ನಡೆದ ಕೆ.ಎಸ್.ಪುಟ್ಟಣ್ಣಯ್ಯ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

nudikarnataka.com

ರಾಜ್ಯದಲ್ಲಿ ರೈತಚಳವಳಿ ಪ್ರಾರಂಭವಾಗಿ 45 ವರ್ಷಗಳು ಹೋರಾಟ ಮಾಡಿದ್ದೇವೆ, ಆದರೆ 90ರ ದಶಕದಿಂದ 2020ರ ವರೆಗೆ ರೈತಸಂಘಗಳ ಪರಿಚಯದ ಅವಧಿ ಮುಗಿದಿದೆ, ಈಗ ಮತ್ತೇ ಚಳವಳಿ ಪುನರ್ ಸಂಘಟನೆಗೊಳ್ಳುತ್ತಿದೆ, ದೇಶದಲ್ಲಿ 541 ಸಂಘಟನೆಗಳು ಸೇರಿ ಹೋರಾಟ ರೂಪಿಸಿವೆ, ಹಾಗೇಯೇ ರಾಜ್ಯದಲ್ಲಿಯು ರೈತ, ದಲಿತ, ಕಾರ್ಮಿಕ ಸಂಘಟನೆಗಳು ಸಂಯುಕ್ತವಾಗಿ ಹೋರಾಟ ಮಾಡಿದರೆ ದೊಡ್ಡ ಚಳವಳಿ ರೂಪಿಸಬಹುದು ಎಂದರು.

ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಸಭೆ, ಸಮಾರಂಭಗಳಿಗಿಂತ ಹೆಚ್ಚಾಗಿ ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಟವಾಗಿ ಕಟ್ಟಬೇಕಾಗಿದೆ. ಯುವಕರನ್ನು ಬೆಳೆಸುವ ಕೆಲಸವಾಗಬೇಕಾಗಿದೆ. ರೈತ ನಾಯಕರ ವಿಚಾರಧಾರೆಗಳನ್ನು ಪಸರಿಸುವ ಕೆಲಸವಾಗಬೇಕೇಂದರು.

ಸಭೆಯಲ್ಲಿ ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಡಾ.ವಾಸು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ