ತಂದೆಯ ಸಾವಿನ ಸಂಕಟದಲ್ಲಿಯೂ ಪರೀಕ್ಷೆಯನ್ನು ಎದುರಿಸಿದ್ದ ನಮ್ಮ ಶಾಲೆ (ಸರ್ಕಾರಿ ಪ್ರೌಢಶಾಲೆ ಚಿಕ್ಕಮಂಡ್ಯ) ವಿದ್ಯಾರ್ಥಿ ಬಾಲಾಜಿ ಇಂದು ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿಯಲ್ಲಿ 332/625(ಶೇ 53.12) ಉತ್ತೀರ್ಣನಾಗಿರುತ್ತಾನೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಎಚ್ ಎನ್ ದೇವರಾಜು ಅವರು ಹರ್ಷ ವ್ಯಕ್ತಪಡಿಸಿದ್ದಾರೆ .
ಇಂತಹ ವಿಷಮ ಸನ್ನಿವೇಶದಲ್ಲಿ ಧೈರ್ಯ ತುಂಬಿದ ಶಿಕ್ಷಕರಿಗೆ ಎಸ್ ಡಿ ಎಂ ಸಿ ಅಧ್ಯಕ್ಷರಿಗೆ ಸದಸ್ಯರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ದೇವರಾಜು ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.





