Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಸವ ಜಯಂತಿ : ಸಕಲ ಸಿದ್ಧತೆಗೆ ಡಿಸಿ ಅಶ್ವತಿ ಸೂಚನೆ

ಮೇ 03 ರಂದು ಬಸವ ಜಯಂತಿ ಆಚರಿಸಲಾಗುತ್ತಿದ್ದು, ಸಾಂಪ್ರದಾಯಿಕವಾಗಿ ಆಚರಿಸಲು ಸಕಲ‌ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಸವ ಜಯಂತಿ ಆಚರಣೆ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಮೇ‌ 3 ರಂದು ಬೆಳಿಗ್ಗೆ ಬಸವೇಶ್ವರ ಅವರ ಭಾವಚಿತ್ರದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮೆರವಣಿಗೆ ಹೊರಟು ಕಲಾಮಂದಿರ ತಲುಪಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲಬೆ ನೀಡಲಾಗುವುದು.

ಮೆರವಣಿಗೆಯಲ್ಲಿ ಪೂಜಾಕುಣಿತ, ಡೊಳ್ಳುಕುಣಿತ, ನಂದಿಧ್ವಜ, ವೀರಗಾಸೆಯಂತಹ ಕಲಾತಂಡಗಳು ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಲಿದೆ ಎಂದರು.

ಕೋವಿಡ್‌ನಿಂದ ಕಳೆದ ಎರಡು ವರ್ಷಗಳಿಂದ ಸರಳವಾಗಿ ಬಸವ ಜಯಂತಿ ಆಚರಿಸಲಾಗಿತ್ತು. ಈ ಬಾರಿ‌ ಮೆರವಣಿಗೆ, ವೇದಿಕೆ ಕಾರ್ಯಕ್ರಮದೊಂದಿಗೆ ಜಯಂತಿಯನ್ನು ಕೋವಿಡ್ ನಿಯಮಾವಳಿ ಜೊತೆಗೆ ಚೆನ್ನಾಗಿ ‌ಆಚರಿಸಬೇಕು ಎಂದರು.

ಬಸವೇಶ್ವರ ಜಯಂತಿಯನ್ನು‌ ಅರ್ಥಪೂರ್ಣವಾಗಿ ಆಚರಿಸಲು, ವೇದಿಕೆ ಕಾರ್ಯಕ್ರಮಕ್ಕೆ ಉಪನ್ಯಾಸಕರನ್ನು ಆಯ್ಕೆ ಮಾಡುವುದು, ಜಯಂತಿಯ ದಿನ ಪಾನಕ-ಮಜ್ಜಿಗೆ ವಿತರಣೆ, ದಾಸೋಹ ಏರ್ಪಡಿಸಿ ಎಂದು ಸೂಚನೆ ನೀಡಿದರು.

ಬಸವ ಜಯಂತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕಾರ್ಯನಿರ್ವಹಣೆಗಾಗಿ ಸಮಿತಿ ರಚಿಸಲಾಗುವುದು. ಎಲ್ಲರೂ ಒಗ್ಗೂಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿ ಎಂದು ಮನವಿ ಮಾಡಿದರು..

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ, ತಹಶೀಲ್ದಾರ್ ಸೌಮ್ಯ, , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್,ಮಂಡ್ಯ ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ರಾಜಶೇಖರ್,ಷಡಕ್ಷರಿ, ಸುಬ್ರಮಣ್ಯ,ಮಂಡ್ಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಪ್ರಕಾಶ್, ತಾಲ್ಲೂಕು ಹಾಗೂ ಬಸವಾಭಿಮಾನಿಗಳಾದ ಜಿ.ಟಿ. ವೀರಪ್ಪ, ಧರಣೇಂದ್ರಯ್ಯ, ಮಹಾಂತಪ್ಪ, ಸಿದ್ದಗಂಗಯ್ಯ ಮತ್ತು ಸಮಾಜದ ಇತರ ಮುಖಂಡರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!