Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮಾನತೆ ಸಾರಿದ ಬಸವಣ್ಣ ವಿಶ್ವಕ್ಕೆ ಮಾದರಿ

ಇವನಾರವ ಇವನಾರವ ಎನ್ನಿಸದೇ, ಇವನಮ್ಮವ ಇವನಮ್ಮವ ಎಂದೆನಿಸಯ್ಯ ಎಂದು ಬಸವಣ್ಣನವರು ಎಲ್ಲಾ ವರ್ಗದವರನ್ನೂ ಸಮಾನವಾಗಿ ಕಾಣಬೇಕೆಂದು ಹೇಳಿ ವಿಶ್ವಕ್ಕೇ ಮಾದರಿಯಾಗಿದ್ದಾರೆ ಎಂದು ಧನಗೂರು ಮಠದ ಶ್ರೀ ಮುಮ್ಮಡಿ ಷಡಕ್ಷರಿ ದೇಶಿಕೇಂದ್ರ ಶಿವಚಾರ್ಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರದ ವೀರಶೈವ ಸಮುದಾಯ ಭವನದಲ್ಲಿ, ಸೋಮವಾರ ಇಂದು ವಿಶ್ವಗುರು ಬಸವಣ್ಣನವರ 889ನೇ ವರ್ಷದ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿದ್ದ ಮೇಲು-ಕೀಳಿನ ವಿರುದ್ಧ ಹೋರಾಡಿದ ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು. 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜವನ್ನು ತಿದ್ದಿದ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಸಮಾನತೆಯನ್ನು ವಿಶ್ವಕ್ಕೆ ಸಾರಿ ಮಾದರಿಯಾದರು. ಅವರ ತತ್ವ, ವಚನಗಳು ಸಾರ್ವಕಾಲಿಕ ಮೌಲ್ಯವುಳ್ಳದಾಗಿದ್ದು ಳಾಗಿದ್ದು, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ತಿಳಿಸಿದರು.

ಸಬ್ ಇನ್ಸ್‌ಪೆಕ್ಟರ್ ಮಹದೇವಯ್ಯ ಮಾತನಾಡಿ, ಮಹಾನ್ ಚೇತನ ಬಸವಣ್ಣನವರು 12ನೇ ಶತಮಾನದಲ್ಲಿ ಅಸಮಾನತೆ ವಿರುದ್ಧ ಹೋರಾಟ ನಡೆಸಿ ಎಲ್ಲರ ನಡುವೆ ಸಮಾನತೆ ತಂದವರು ಬಸವಣ್ಣ. ಯಾವುದೋ ಒಂದು ವರ್ಗಕ್ಕಾಗಲಿ, ಜಾತಿಗಾಗಲಿ ಸೀಮಿತರಾಗಿರಲಿಲ್ಲ. ಎಲ್ಲರನ್ನು ಸಮಾನತೆಯಿಂದ ಕಂಡ ಮಹಾತ್ಮ ಎಂದರು.
ಅವರ ತತ್ವ,ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಗೆ ಬಸವಣ್ಣನವರ ಭಾವಚಿತ್ರದೊಂದಿಗೆ ಹಲಗೂರು ನಾಗರಾಜಪ್ಪನವರ ಕಲಾತಂಡದವರಿಂದ ವೀರಗಾಸೆ, ಪೂಜಾ ಕುಣಿತ ತಂಡಗಳೊಂದಿಗೆ ಭಾರತೀನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೀರಶೈವ ಕ್ಷೇಮಾಭಿವೃದ್ಧಿ ಭಾರತೀನಗರ ಅಧ್ಯಕ್ಷ ಜಿ.ಆರ್.ಶಿವಣ್ಣ, ಮಡೇನಹಳ್ಳಿ ತೋಂಟದಾರ್ಯ ಮಠದ ಸದಾಶಿವಸ್ವಾಮಿ, ಅವ್ವೇರಹಳ್ಳಿ ಮಠದ ಸಿದ್ದಲಿಂಗ ಶಿವಚಾರ್ಯಸ್ವಾಮಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಕವಿತಾ ,ವೈ.ಬಿ.ಶ್ರೀಕಂಠಯ್ಯ, ರಾಜು,ಚಂದ್ರಶೇಖರ್, ಹಲವರು ಹಾಜರಿದ್ದರು.

ಇದನ್ನು ಓದಿ: ಸ್ನೇಹಿತನನ್ನೆ ಕೊಂದಿದ್ದ ಪಾತಕಿಗಳ ಬಂಧನ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!