Thursday, September 19, 2024

ಪ್ರಾಯೋಗಿಕ ಆವೃತ್ತಿ

ಐಪಿಎಸ್ ಭಾಸ್ಕರ್ ರಾವ್ ಗೆ ಸಿಗುವ ಬಿಜೆಪಿ ಟಿಕೆಟ್, ಐಎಎಸ್ ಶಿವರಾಂ ಗೆ ಏಕೆ ಸಿಗಲಿಲ್ಲ ? ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ !

ಭಾರತೀಯ ಜನತಾ ಪಾರ್ಟಿಯು ಟಿಕೆಟ್ ಹಂಚಿಕೆ ಮಾಡಿದ ನಂತರ ಒಂದಲ್ಲ ಒಂದು ವಿವಾದಗಳು ಮುಗಿಲೇಳುತ್ತಿದೆ.

ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ ನಂತರ ಕುರುಬ ಸಮುದಾಯಕ್ಕೆ ಕೆ.ಎಸ್.ಈಶ್ವರಪ್ಪ ಸೇರಿದ ಕೆ.ಎಸ್.ಈಶ್ವರಪ್ಪ ಅವರಿಂದ ರಾಜಕೀಯ ನಿವೃತ್ತಿ ಘೋಷಣೆ ಮಾಡಿಸಿದ ಬಿಜೆಪಿ, ಈಗ ದಲಿತರನ್ನು ತೆರೆಮರೆಗೆ ಸರಿಸುವ ಪ್ರಯತ್ನಕ್ಕೆ ಸದ್ದಿಲ್ಲದೇ ಕೈ ಹಾಕಿದೆ ಎಂಬ ಆಕ್ರೋಶ ಈಗ ರಾಜ್ಯದಾದ್ಯಂತ ಭುಗಿಲೆದ್ದಿದೆ.

“>

ಇತ್ತೀಚಿಗಷ್ಟೆ ಬಿಜೆಪಿಗೆ ಸೇರಿದ ಬ್ರಾಹ್ಮಣ ಸಮುದಾಯ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಆದರೆ 10 ವರ್ಷಗಳಿಂದ ಬಿಜೆಪಿಯಲ್ಲಿ ದುಡಿಯುತ್ತಿರುವ ದಲಿತ ಸಮುದಾಯಕ್ಕೆ ಸೇರಿದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರಿಗೆ ಟಿಕೆಟ್ ನೀಡದೇ ಮೂಲೆಗುಂಪು ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ಲಿಂಗಾಯತ, ಕುರುಬ ನಾಯಕರು ಸೇರಿಸಿದಂತೆ ಪರಿಶಿಷ್ಟ ಸಮುದಾಯದ ನಾಯಕರನ್ನು ಮೂಲೆಗುಂಪು ಮಾಡಿ, ಬ್ರಾಹ್ಮಣ ಸಮುದಾಯದ ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಷಿ ಹಾಗೂ ಭಾಸ್ಕರ್ ರಾವ್ ಅಂತವರನ್ನು ಮುನ್ನೆಲೆಗೆ ತರಲಾಗುತ್ತಿದೆ. ಇದರ ಅರ್ಥವೇನು ? ನೆಟ್ಟಿಗರು ಪ್ರಶ್ನಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!