ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಗೋವಿಂದಪ್ಪ ಮರು ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದರು.
ಒಟ್ಟು 20 ಮಂದಿ ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮ್ಯ ಹಾಗೂ ಗೋವಿಂದರಾಜು ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ರಮ್ಯ ಅವರು ನಿಗದಿತ ಸಮಯದಲ್ಲಿ ತಮ್ಮ ನಾಮಪತ್ರ ಹಿಂಪಡೆದ ಕಾರಣ ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಯೂ ಆಗಿದ್ದ ಇಒ ನಿಶಾಂತ್ ಕೀಲಾರ ಘೋಷಣೆ ಮಾಡಿದರು.
ಗೋವಿಂದರಾಜು ಮತ್ತೆ ಆಯ್ಕೆ:
ಒಡಂಬಡಿಕೆಯಂತೆ ಗೋವಿಂದರಾಜು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮೇ.7 ರಂದು ಚುನಾವಣೆ ನಿಗದಿಯಾಗಿತ್ತು. ಚುನಾವಣೆ ಘೋಷಣೆ ನಂತರ ಕಾಂಗ್ರೆಸ್‌ನ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಬೆಂಬಲಿಗರು ಕಿರಂಗೂರು ಗ್ರಾ.ಪಂ ಚುಕ್ಕಾಣಿ ಹಿಡಿಯುವ ಸಲುವಾಗಿ ಜೆಡಿಎಸ್ ಪಕ್ಷದ ಕೆಲ ಸದಸ್ಯರನ್ನು ಹೈಜಾಕ್ ಮಾಡಿ ಚುನಾವಣಾ ತಂತ್ರ ಹೆಣೆದಿದ್ದರು.
ಆದರೆ ಇದಕ್ಕೆ ಪ್ರತ್ಯುತ್ತರ ಎಂಬಂತೆ ಜೆಡಿಎಸ್ ಮುಖಂಡರುಗಳು ಅಚ್ಚರಿ ಬೆಳವಣಿಗೆ ಮೂಲಕ ಮತ್ತೊಮ್ಮೆ ಗೋವಿಂದರಾಜು ಅವರನ್ನೇ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.
ಈ ವೇಳೆ ಪಿಡಿಒ ಪ್ರಶಾಂತ್ ಬಾಬು, ಉಪಾಧ್ಯಕ್ಷೆ ಕೆಂಪಮ್ಮ, ಸದಸ್ಯರಾದ ಶ್ರೀನಿವಾಸ್, ಮಹೇಂದ್ರ, ಪುಟ್ಟರಾಜು, ಕುಮಾರಸ್ವಾಮಿ, ಉಷಾ, ಜಗದೀಶ್, ಜೆಡಿಎಸ್ ಮುಖಂಡರಾದ ತಿಲಕ್‌ಕುಮಾರ್, ನೆಲಮನೆ ದಯಾನಂದ್, ಕುಮಾರಸ್ವಾಮಿ, ರಾಜಲಕ್ಷ್ಮಿ, ಚಿಕ್ಕರಾಮಾಂಜೇಗೌಡ, ರಂಗಪ್ಪ,ಮರೀಗೌಡ, ಶಿವರಾಮು, ತಿಮ್ಮೇಗೌಡ, ಮಾಯಪ್ಪ, ಶ್ರೀನಿವಾಸ್ ಸೇರಿದಂತೆ ಜೆಡಿಎಸ್ ಮುಖಂಡರು ಹಾಜರಿದ್ದು ನೂತನ ಅಧ್ಯಕ್ಷರನ್ನು ಅಭಿನಂಧಿಸಿದರು.