Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬೈಕಾಥಾನ್ ಕಾರ್ಯಕ್ರಮಕ್ಕೆ ಚಾಲನೆ

ರಸ್ತೆ ಅಪಘಾತ ತಡೆಗಟ್ಟಲು ಒಬ್ಬ ಸವಾರ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮೈಸೂರಿನಿಂದ ಚಿತ್ರದುರ್ಗದವರೆಗೆ ನಡೆದ ಬೈಕಾಥಾನ್ ಕಾರ್ಯಕ್ರಮಕ್ಕೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಐಶ್ವರ್ಯ ಚಾಲನೆ ನೀಡಿದರು

ರೋಟರಿ ಮಂಡ್ಯ, ರೋಟರಿ ಮೈಸೂರು, ವಿವೇಕಾನಂದ ಯೂತ್ ಮೂಮೆಂಟ್ ರೋಟ್ರ್ಯಾಕ್ಟ್ ಮೈಸೂರು, ಜೀವರಕ್ಷ ಇವರ ಸಂಯುಕ್ತಶ್ರಯದಲ್ಲಿ ಅಪಘಾತ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪಾಕ್ಷಿಕ ಪ್ರದರ್ಶನವನ್ನು ಜೀವರಕ್ಷ ಸಂಸ್ಥೆಯ ತಂಡದವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಜನರಕ್ಷ ಸಂಸ್ಥೆಯ ಡಾ.ರೇಖಾ, ನಗರಸಭೆಯ ಪರಿಸರ ಅಭಿಯಂತರ ರುದ್ರೇಗೌಡ,  ರೋಟರಿಯ ಅಧ್ಯಕ್ಷೆ ಅನುಪಮ, ಮೈಸೂರು ರೋಟರಿ ಅಧ್ಯಕ್ಷ ಚೇತನ್, ಕಾರ್ಯದರ್ಶಿಗಳಾದ ರಾಜೇಶ್, ಸೋಮೇಗೌಡ, ಲಕ್ಷ್ಮಿ ನಾರಾಯಣ ಶಾಸ್ತ್ರಿ, ರೋಟ್ರ್ಯಾಕ್ಟ್ ಜಸ್ವಂತ್ ಯಶವಂತ ಹಾಗೂ ಇತರರು ಇದ್ದರು.

ಮಂಡ್ಯ ಮಿಮ್ಸ್ ನಸಿ೯ಂಗ್ ಶಾಲೆ ಪ್ರಾಂಶುಪಾಲ ಕಾಮೆಂಟ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮಂಡ್ಯ ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಗಳ ಮೂಲಕ ಜಾಗೃತಿ ಮೂಡಿಸಲಾಯಿತು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!