Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯಕ್ಕೆ ಒಬಮಾ ಆಗಮಿಸುವ ಮುನ್ನ ರಸ್ತೆ ಕಾಮಗಾರಿ ಪೂರ್ಣ: ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯವರಾದ ಡಾ. ವಿವೇಕ್ ಅವರು ಅಮೆರಿಕ ಅಧ್ಯಕ್ಷರ ಆಪ್ತ ವೈದ್ಯರಾಗಿರುವುದು ಹೆಮ್ಮೆಯ ವಿಷಯ. ಅವರ ಆಹ್ವಾನದ ಮೇರೆಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಮಾ ಅವರು ಮಂಡ್ಯಕ್ಕೆ ಆಗಮಿಸಲಿದ್ದು, ಅಷ್ಟರಲ್ಲಿ ಮಂಡ್ಯ- ಕೌಡ್ಲೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ನಗರದಲ್ಲಿ ಕೆರಗೋಡು ಮಂಡ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಬಮಾ ಅವರು ಹಲ್ಲೇಗೆರೆಯಲ್ಲಿ ”ಸ್ಟ್ಯಾಚು ಆಫ್ ಮದರ್ ಅರ್ಥ್” ಪ್ರತಿಮೆ ಅನಾವರಣಕ್ಕೆ ಮಂಡ್ಯಗೆ ಬರುವಷ್ಟರಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಬೇಕು ತಾಕೀತು ಮಾಡಿದರು.

ಜೀವನ ಮಟ್ಟ ಸುಧಾರಣೆ ಆದ್ಯತೆ 

ಜನರ ಜೀವನ ಮಟ್ಟ ಸುಧಾರಣೆ ಹಾಗೂ ಭೌತಿಕ ಅಭಿವೃದ್ಧಿ ಎರೆಡೂ ರಾಜ್ಯ ಸರ್ಕಾರದ ಆದ್ಯತೆ. ಇಂದಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನಮ್ಮ ಬದ್ದತೆಗೆ ಸಾಕ್ಷಿಯಾಗಿದೆ. ಗುಣಮಟ್ಟ ಕೊಯ್ದುಕೊಂಡು ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು, ರೈತರು ಸಹಕರಿಸಿಬೇಕು ಎಂದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ನಂತರ ಮಂಜೂರಾಗಿ ಟೆಂಡರ್ ಕೂಡ‌ ಮುಗಿದು ಈ ಹೊಸ ಕಾಮಗಾರಿ ಪ್ರಾರಂಭವಾಗಿದೆ. ಜನರ ದಶಕದ ಕನಸು ಈಡೇರಿದೆ, ನಾಗಮಂಗಲ ,ಕೌಡ್ಲೆ ತುಮಕೂರು ಕಡೆಗೆ ತೆರಳುವವರಿಗೆ ಈ ರಸ್ತೆ ಕಾಮಗಾರಿಯಿಂದ ಅನುಕೂಲವಾಗಲಿದೆ, 11 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದೆ .ಶೀಘ್ರದಲ್ಲೇ 150 ಕೋಟಿ ರೂ ವೆಚ್ಚದಲ್ಲಿ ಜಿಲ್ಲೆಯ ವಿವಿಧ ಕಾಮಗಾರಿ ಪ್ರಾರಂಭವಾಗಲಿದೆ ಭರವಸೆ ನೀಡಿದರು.

ಸಂತಸದ ವಿಷಯ

ಮಂಡ್ಯ ಶಾಸಕ ರವಿಕುಮಾರ್ ಮಾತನಾಡಿ, ಕಳೆದ 10 ವರ್ಷಗಳಿಂದ ಮಂಡ್ಯ ಕೆರಗೋಡು ರಸ್ತೆ ನೆನೆಗುದಿಗೆ ಬಿದ್ದಿದ್ದು ದುರಸ್ತಿ ಕಾಮಗಾರಿಗೆ ಈಗ ಚಾಲನೆ ದೊರೆತಿರುವುದು ಸಂತೋಷದ ವಿಚಾರ. ಕಳೆದ 10 ವರ್ಷಗಳಲ್ಲಿ ಈ ರಸ್ತೆಯಲ್ಲಿ ಹಲವು ಅಪಘಾತಗಳು, ಒಂದೆರೆಡು ಪ್ರಾಣ ಹಾನಿಗಳೂ ಸಂಭವಿಸಿತ್ತು. ಆದರೆ ಹಿಂದೆ ಆಳಿದವರು ಯಾವುದೇ ಅಭಿವೃದ್ಧಿಗೆ ಗಮನ ಹರಿಸಿಲ್ಲ.ಈಗ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.ಇದು ನಮ್ಮ ಸರ್ಕಾರ
ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರ ಇಚ್ಚಾಶಕ್ತಿ ಏನೆಂಬುದನ್ನು ತೋರುತ್ತಿದೆ ಎಂದರು .

11 ಕೋಟಿ ರೂ ವೆಚ್ಚದಲ್ಲಿ ಎರೆಡು ತಿಂಗಳೊಳಗೆ ರಸ್ತೆ ಕಾಮಗಾರಿ‌ ಪೂರ್ಣ ಗೊಳ್ಳಲಿದೆ. ನಗರದ ವಿವಿಧ ಭಾಗಗಳಲ್ಲಿ 5 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ‌. ಇದಲ್ಲದೆ 150ಕೋಟಿ ರೂ ಗಳಲ್ಲಿ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿ ಆದಷ್ಟು ಬೇಗ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ. ಸಿ.ಇ.ಓ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮತ್ತಿತರರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!