Friday, September 20, 2024

ಪ್ರಾಯೋಗಿಕ ಆವೃತ್ತಿ

BJP – RSS ಮಾಡುತ್ತಿರುವುದು ವೈದಿಕ ರಾಜಕಾರಣ : ಮುಕುಂದರಾಜ್

ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿರುವುದು ವೈದಿಕ ಹಾಗೂ ಜಾತಿ ರಾಜಕಾರಣವೇ ಹೊರತು ಕೋಮು ರಾಜಕೀಯವಲ್ಲ ಎಂದು ಸಾಹಿತಿ ಹಾಗೂ ನಾಟಕಕಾರ ಮುಕುಂದರಾಜ್ ಸ್ಪಷ್ಟಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವೈದಿಕರ ಪರವಾದ ರಾಜಕೀಯ ಮಾಡುತ್ತಿದೆ, ಇದನ್ನು ಈ ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು. ಟಿಪ್ಪುವಿನ ಸಾಧನೆಗಳನ್ನು ಮರೆಮಾಚಲು ಉರಿಗೌಡ ಹಾಗೂ ನಂಜೇಗೌಡ ಎಂಬ ಇಬ್ಬರು ವ್ಯಕ್ತಿಗಳು ಆರ್.ಎಸ್.ಎಸ್ ಮತ್ತು ಬಿಜೆಪಿಗಳು ಸೃಷ್ಟಿಮಾಡಿವೆ. ಸಂಘ ಪರಿವಾರದ ಮುಖಂಡರು ಈ ಬಗ್ಗೆ ಇಲ್ಲಸಲ್ಲದ ಕಟ್ಟುಕತೆಗಳನ್ನು ಹೆಣಿದು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದುವರೆಗೆ ದಾಖಲಾಗಿರುವ ಟಿಪ್ಪುವರೆಗಿನ ಇತಿಹಾಸದಲ್ಲಿ ಉರಿಗೌಡ ಹಾಗೂ ನಂಜೇಗೌಡ ಎಂಬ ವ್ಯಕ್ತಿಗಳ ಹೆಸರುಗಳು ಎಲ್ಲಿಯೂ ಕಂಡು ಬರುವುದಿಲ್ಲ. ಈ ಹೆಸರುಗಳನನ್ನು ಉದ್ಧೇಶ ಪೂರ್ವಕವಾಗಿಯೇ ತೇಲಿ ಬಿಡಲಾಗುತ್ತಿದೆ. ಆ ಮೂಲಕ ಒಕ್ಕಲಿಗರನ್ನು ಕೊಲೆಗಡುಕರು ಎಂದು ಬಿಂಬಿಸಿ ಬಿಜೆಪಿ-ಆರ್.ಎಸ್.ಎಸ್ ಗಳು ವೈದಿಕರೇ ಶ್ರೇಷ್ಠ ಎಂದು ಹೇಳಲು ಹೊರಟಿವೆ ಎಂದು ದೂರಿದರು.

ಲಾವಣಿಗಳಲ್ಲಿ ಟಿಪ್ಪು ಜೀವನ ಚರಿತ್ರೆ ದಾಖಲು

18 ನೇ ಶತಮಾನದಲ್ಲಿಯೇ ಟಿಪ್ಪುವಿನ ಜೀವನ ಚರಿತ್ರೆ, ಹೋರಾಟಗಳು ಮತ್ತು ಸಾಧನೆಗಳು ಜನಪದರ ಲಾವಣಿಗಳಲ್ಲಿ ದಾಖಲಾಗಿವೆ. ಇವುಗಳು ಪ್ರಮುಖವಾದ ಮೌಖಿಕ ಸಾಹಿತ್ಯಾಧಾರಗಳಾಗಿವೆ. ಇವುಗಳನ್ನು ಯಾರು ಕೂಡ ಅಲ್ಲಗೆಳೆಯಲು ಸಾಧ್ಯವಿಲ್ಲ. ಹೀಗಿರುವಾಗ ಬಿಜೆಪಿ, ಆರ್.ಎಸ್.ಎಸ್ ನವರು ನೂರು ಬಾರಿ ಸುಳ್ಳುಗಳನ್ನು ಹೇಳಿ ಸತ್ಯ ಎಂದು ನಿರೂಪಿಸಲು ಸಾಧ್ಯವಿಲ್ಲ ಎಂದರು.

ಟಿಪ್ಪು ದೀನ ದಲಿತರು, ಹಿಂದುಳಿದವವರಿಗೆ ಭೂಮಿ ಹಂಚಿಕೆ ಮಾಡಿದ್ದ. ಅಲ್ಲದೇ ಶ್ಯಾನುಭೋಗರ ದುರಾಡಳಿತ ಹೆಚ್ಚಿದಾಗ ಶ್ರೂದ ಜನಾಂಗಕ್ಕೆ ಸೇರಿದ ವ್ಯಕ್ತಿಗಳನ್ನು ಪಟೇಲರು ಮತ್ತು ಗೌಡರನ್ನಾಗಿ ನೇಮಿಸಿದ್ದ. ಈ ಕ್ರಮಗಳು ಟಿಪ್ಪುವಿನ ಜನಪರ ಕಾರ್ಯಗಳಿಗೆ ಸಾಕ್ಷಿಯಾಗಿವೆ. ಇಂತಹ ಉದಾರ ಮನೋಭಾವದ ಟಿಪ್ಪುವನ್ನು ಕೆಲವರು ರಾಜಕೀಯ ತೆವಲಿಗಾಗಿ ಖಳನಾಯಕನಂತೆ ಚಿತ್ರಿಸಲು ಹೊರಟ್ಟಿದ್ದಾರೆ. ಆದ್ದರಿಂದ ಈ ಬಗ್ಗೆ ನಾಡಿನ ಜನರು ಎಚ್ಚರಿಕೆಯಿಂದಿರಬೇಕೆಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ, ಸಾಹಿತಿ ಕಾಳೇಗೌಡ ನಾಗವಾರ, ನ್ಯಾಯವಾದಿ ರಮೇಶ್ ಗೌಡ, ರೇಣುಕಮ್ಮ ಭಕ್ತರಹಳ್ಳಿ, ಕನ್ನಡ ಸೇನೆಯ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!