Tuesday, November 24, 2026

ಪ್ರಾಯೋಗಿಕ ಆವೃತ್ತಿ

ರಕ್ತದ ಕೊರತೆ ನೀಗಿಸಲು ರಕ್ತದಾನ ಅಭಿಯಾನ ನಡೆಯಬೇಕಿದೆ ; ಮೀರಾಶಿವಲಿಂಗಯ್ಯ

ಭಾರತದಲ್ಲಿ ರಕ್ತದ ಬೇಡಿಕೆ ಅಂದಾಜು ೧೫ ದಶಲಕ್ಷ ಯುನಿಟ್‌ಗಳಿದ್ದು, ಕೊರತೆ ನೀಗಿಸಲು ರಕ್ತದಾನ ಅಭಿಯಾನಗಳು ಮತ್ತು ಹೊಸ ರಕ್ತದಾನಿಗಳು ಹೆಚ್ಚಬೇಕಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಹೇಳಿದರು.

ಮಂಡ್ಯ ಮಿಮ್ಸ್ ಮೆಡಿಕಲ್ ಕಾಲೇಜಿನ ಸಭಾಗಂಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿ, ಮಿಮ್ಸ್ನ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ವೈದ್ಯ ವಿದ್ಯಾರ್ಥಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶಾದ್ಯಂತ ಹೊಸರಕ್ತದಾನಿಗಳು ಹೆಚ್ಚಾದರೆ ಮಾತ್ರ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆ-ಕೊರತೆ ಸುಧಾರಿಸಬಹುದು, ಯುವಜನತೆ, ೧೮ರಿಂದ ೬೦ವರ್ಷದೊಳಗಿನ ಆರೋಗ್ಯವಂತ ಮಹಿಳೆಯರು-ಪುರುಷರು ರಕ್ತದಾನ ಮಾಡಬೇಕು ಎಂದು ನುಡಿದರು.

ಭಾರತದಲ್ಲಿ ವಾರ್ಷಿಕವಾಗಿ ಸುಮಾರು ೧೫ ದಶಲಕ್ಷ ರಕ್ತದ ಘಟಕಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ, ಏಕೆಂದರೆ ಅಪಘಾತಗಳು, ಕ್ಯಾನ್ಸರ್ ಚಿಕಿತ್ಸೆ, ಹೆರಿಗೆ ಸಂಬAಧಿತ ತೊಡಕುಗಳು ಮತ್ತು ದೀರ್ಘಕಾಲದ ರೋಗಗಳಿಗೆ ರಕ್ತದ ಅವಶ್ಯಕತೆ ಇದೆ.ದೇಶದಾದ್ಯಂತ ಬೇಡಿಕೆ ಮತ್ತು ಪೂರೈಕೆಯ ನಡುವೆ ನಿರಂತರ ಅಂತರವಿದೆ ಎಂದು ತಿಳಿಸಿದರು.

ಪ್ರಪಂಚ ಎಷ್ಟೇ ಅತ್ಯಾಧುನಿಕವಾಗಿ ವಿಜ್ಞಾನ-ತಂತ್ರಜ್ಞಾನ ಆರೋಗ್ಯಕ್ಷೇತ್ರಗಳಲ್ಲಿ ಮುಂದುವರಿದರೂ ರಕ್ತಕ್ಕೆ ಪರ್ಯಾಯ ರಕ್ತವಿಲ್ಲ, ಮನುಷ್ಯನ ರಕ್ತವನ್ನೇ ಮನುಷ್ಯರಿಗೆ ನೀಡಬೇಕು, ಮಾನವೀಯತೆಯಿಂದ ಮಾತ್ರ ಅಗತ್ಯ ಪೂರೈಸಲು ಸಾಧ್ಯ ಎಂದು ಎಚ್ಚರಿಸಿದರು.

ಮಿಮ್ಸ್ ನಿರ್ದೇಶಕ ಡಾ. ನರಸಿಂಹಸ್ವಾಮಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಅವರು ಸಾಮಾಜಿಕ ಕಳಕಳಿಯಿಂದ ಸಾಕಷ್ಟು ಸೇವೆಗಳನ್ನು ನೀಡುತ್ತಿದ್ದಾರೆ, ಇವರು ಇತರರಿಗೂ ಮಾದರಿ, ರಕ್ತದಾನ ಶಿಬಿರ ಆಯೋಜಿಸಿ ಜೀವ ಉಳಿಸುವುದು, ಬೆಳೆಸುವುದು ಮಾಡುತ್ತಿದ್ದಾರೆ ಎಂದು ನುಡಿದರು.

ಮಿಮ್ಸ್ ಆಸ್ಪತ್ರೆಗೆ ರಕ್ತಕ್ಕಾಗಿ ವಿವಿಧ ಜಿಲ್ಲೆಗಳಿಂದ ಬರುತ್ತಾರೆ, ಅವಶ್ಯಕತೆ ಹೆಚ್ಚಾಗುತ್ತಿದೆ, ಬೇಡಿಕೆಯನ್ನು ನೀಗಿಸಲು ಇಂತಹ ರಕ್ತದಾನ ಶಿಬಿರಗಳಿಂದ ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಹನುಮಂತ ಪ್ರಸಾದ್ ಮಾತನಾಡಿ ಮಿಮ್ಸ್ ನಲ್ಲಿ ೧೮ವರ್ಷದಿಂದ ರಕ್ತದಾನ ಶಿಬಿರಗಳು ನಡೆಯುತ್ತಿವೆ, ೨೦೦ ಮಂದಿ ನೋಂದಣಿಯಾಗಿ ರಕ್ತದಾನದಲ್ಲಿ ತೊಡಗಿದ್ದಾರೆ, ಎಲ್ಲಾ ಗ್ರೂಪ್‌ಗಳಿಂದಲೂ ಸಂಗ್ರಹವಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ವೈದ್ಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸ್ವಯಂ ಪ್ರೇರಣೆಯಿಂದ ಸುಮಾರು ೧೦೦ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹವಾಯಿತು.

ಕಾರ್ಯಕ್ರಮದಲ್ಲಿ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ರಕ್ತನಿಧಿ ಕೇಂದ್ರ ಮುಖ್ಯಸ್ಥ ಡಾ.ಮುರಳೀಧರ್‌ಭಟ್, ರಫಿ, ಡಾ.ಗಾಯಿತ್ರಿ, ಕ್ಲೇಮೆಂಟ್, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿ ಸಿಬ್ಬಂದಿಗಳಾದ ರಾಮು, ಜಗದೀಶ್ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ