Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಎಂಸಿ ಕೇಂದ್ರ ಅಧಿಕೃತ ವಾಗಿ ಇನ್ನೂ ಉದ್ಘಾಟನೆಯಾಗಿಲ್ಲ

ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿ ಹಾಲು ಉತ್ಪಾದಕರ ಸಂಘದ ಬಿಎಂಸಿ ಕೇಂದ್ರವನ್ನು ಪರೀಕ್ಷಾರ್ಥವಾಗಿ ಆರಂಭಿಸಲಾಗಿದೆಯೇ ಹೊರತು ಅಧಿಕೃತವಾಗಿ ಇನ್ನೂ ಉದ್ಘಾಟನೆಗೊಂಡಿಲ್ಲ, ಜೊತೆಗೆ ಉದ್ಘಾಟನಾ ಸಮಾರಂಭಕ್ಕೆ ಜನರನ್ನು ಕರೆತರುವಂತೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಯಾರೂ ಕೂಡ ಒತ್ತಡ ಹಾಕಿಲ್ಲವೆಂದು ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಸಂಘದ ಅಧ್ಯಕ್ಷ ರೇಣುಕಾರಾಧ್ಯ ಸ್ವಷ್ಟಪಡಿಸಿದರು.

ಮಳವಳ್ಳಿ ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಎಫ್ ನಿರ್ದೇಶಕ ವಿಶ್ವನಾಥ್ ನೇತೃತ್ವದಲ್ಲಿ ತಾಲ್ಲೂಕಿನ ವಡ್ಡರಹಳ್ಳಿ ಹಾಲು ಉತ್ಪಾದಕರ ಸಂಘದ ಬಿಎಂಸಿ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿ ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರು ಹಾಗೂ ಉತ್ಪಾದಕರಿಗೆ ಊಟ ಹಾಕಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ತಾಲ್ಲೂಕಿನ ಎಲ್ಲಾ ಸಂಘಗಳಲ್ಲಿ ಎಲ್ಲಾ ಪಕ್ಷದವರು ಇದ್ದಾರೆ. ಎಲ್ಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆಂದು ಹೇಳಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಮೇಶ್ ಮಾತನಾಡಿ, ತಾಲ್ಲೂಕಿನ ಹಾಲಿನ ಡೈರಿ ಕಾರ್ಯದರ್ಶಿಗಳಿಗೆ ಕಾರ್ಯಕ್ರಮಕ್ಕೆ ಜನರನ್ನು ಕರೆತರುವಂತೆ ಯಾರು ಕೂಡ ಒತ್ತಡ ಹಾಕಿಲ್ಲ, ಸಂಘದ ಸಿಬ್ಬಂದಿಗಳು ಹಾಗೂ ಉತ್ಪಾದಕರನ್ನು ಒಂದೆಡೆ ಸೇರಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಕೆಎಂಎಫ್ ನಿರ್ದೇಶಕರಾದ ವಿಶ್ವನಾಥ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕಾಂಗ್ರೆಸ್ ನಾಯಕರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

ಮನ್‌ಮುಲ್ ನಿರ್ಧೇಶಕ ವಿಶ್ವನಾಥ್ ಅವರು ಮನ್‌ಮುಲ್‌ನಿಂದ ಸಿಗುವ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಸಾವನ್ನಪ್ಪಿದ ಹಸುಗಳು ಕುಟುಂಬಕ್ಕೆ ಪರಿಹಾರ ಕೊಡಿಸುತ್ತಿದ್ದಾರೆ, ಕಾರ್ಯದರ್ಶಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಸಂದರ್ಭದಲ್ಲಿ ಕುಟುಂಬಕ್ಕೆ ಸಾಂತ್ವಾನ ಹೇಳುವುದರ ಜೊತೆಗೆ 2 ಲಕ್ಷ ಪರಿಹಾರ ಕೊಟ್ಟಿದ್ದಾರೆ, ಸಂಘದ ನೌಕರರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ವಿಶ್ವನಾಥ್ ಅವರು ವಡ್ಡರಹಳ್ಳಿಯಲ್ಲಿ ಬಿಎಂಸಿ ಕೇಂದ್ರವನ್ನು ಉದ್ಘಾಟಿಸುತ್ತಿದ್ದು, ಸಮಾರಂಭಕ್ಕೆ ಹೋಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂಘಗಳ ಅಭಿವೃದ್ದಿಗಾಗಿಯೇ ಹೊರತು ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.

ಗೋಷ್ಠಿಯಲ್ಲಿ ನೆಲ್ಲೂರು ನಂಜುಂಡೇಗೌಡ, ನಾಗರಾಜು, ಕಂಸಾಗರ ವೆಂಕಟೇಶ್, ಗಾಜನೂರು ಮಹೇಶ್, ನಂಜುಂಡಸ್ವಾಮಿ, ಬಸವಣ್ಣ, ಸತೀಶ್, ನಿಟ್ಟೂರು ಪ್ರಕಾಶ್, ಜಯರಾಮು ಸೇರಿದಂತೆ ಹಲವಾರಿದ್ದರು‌

Related Articles

1 COMMENT

  1. , ಒಳ್ಳೆಯ ಕಾರ್ಯಕ್ರಮವಾಗಿದೆ ಬ್ರಷ್ಟಾಚಾರದ ಬಗ್ಗೆ ಕಾಳಜಿ ವಹಿಸಿ ರಾಜಕೀಯ ಪಕ್ಷಗಳ ಬಗ್ಗೆ ಚರ್ಚೆ ಬೇಡ ರೈತರ ಬಗ್ಗೆ ಕಾಳಜಿ ವಹಿಸಿ ವಿದ್ಯಾಭ್ಯಾಸದ ಬಗ್ಗೆ ಚರ್ಚೆ ಮಾಡಿ ಸುಖಾ ಸುಮ್ಮನೆ ಪಕ್ಷಗಳ ಬಗ್ಗೆ ಚರ್ಚೆ ಬೇಡ

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!