Sunday, November 22, 2026

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಅಧಿಕಾರಕ್ಕೆ ತರಲು ಜನರ ಸಹಕಾರ ಅಗತ್ಯ : ಹೆಚ್.ಕೃಷ್ಣ

ತಳಮಳಮಟ್ಟದಿಂದ ಕಾಂಗ್ರೆಸ್ ಸಂಘಟನೆಗೊಳಿಸಿ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜನತೆ ಸಹಕಾರ ನೀಡಬೇಕು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ.ಎಚ್.ಕೃಷ್ಣ ತಿಳಿಸಿದರು.

ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಮುತ್ತೇಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಗಳಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಅವರು ಭೇಟಿ ನೀಡಿ, ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮುಖಂಡರಲ್ಲಿ ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಸ್ಥಳೀಯ ಅಭಿವೃದ್ಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತೇವೆ, ಜನತೆಗೆ ಏನು ಅಗತ್ಯವಿದೆ, ಯಾವ ಯಾವ ಸಮಸ್ಯೆಗಳು ಪರಿಹಾರವಾಗದೇ ಉಳಿದಿವೆ ಎಂಬುವುದು ತಿಳಿದುಕೊಳ್ಳುತ್ತಿದ್ದೇವೆ ಎಂದು ನುಡಿದರು.

ಮುತ್ತೇಗೆರೆ, ನಂಜೇನಹಳ್ಳಿ, ಹೊಸಕೊಪ್ಪಲು, ಮರಿಕಾಳನಕೊಪ್ಪಲು, ಮರಿಗೌಡನಕೊಪ್ಪಲು, ಬೆಣಚಕಲ್ಲುಕೊಪ್ಪಲು, ಕೋಳಿಸೀರನಹಳ್ಳಿ, ಎಂ.ಹಟ್ನ, ಬುಂಡಾರೆಕೊಪ್ಪಲು, ನಂದನಹಳ್ಳಿ, ತೊಂಡೆಸಿದ್ದನಕೊಪ್ಪಲು, ಹುನುಗನಹಳ್ಳಿ ಕಾಲೋನಿ, ಹಾರಕದಹಳ್ಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಮುಖಂಡರ ಮನೆಗಳಲ್ಲಿ ಭೇಟಿಯಾಗಿ ಪಕ್ಷದ ಸಂಘಟನೆಗೆ ನೀಡುತ್ತಿರುವ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ ಗೌಡ, ಡಿಸಿಸಿ ಕಾರ್ಯದರ್ಶಿ ಕಾಳೇಗೌಡ, ಹೊನ್ನೇಗೌಡ, ರಾಮೇಗೌಡ, ಬೋರೆಗೌಡ, ಮರಿಗೌಡ, ಕಾಯಿ ಬೋರೇಗೌಡ, ಚೆನ್ನೇಗೌಡ, ಶಿವಕುಮಾರ್, ಯತಿರಾಜ್, ಪಟೇಲ್ ಪುಟ್ಟಸ್ವಾಮಿ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ