Friday, September 20, 2024

ಪ್ರಾಯೋಗಿಕ ಆವೃತ್ತಿ

ಗೌತಮ ಬುದ್ಧರ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ : ರಾಮಯ್ಯ

ಬುದ್ಧ ಭಾರತ ಫೌಂಡೇಶನ್ ವತಿಯಿಂದ ಗೌತಮ ಬುದ್ಧರ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಬುದ್ಧ ಭಾರತ ಫೌಂಡೇಶನ್ ಅಧ್ಯಕ್ಷ ಜೆ ರಾಮಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌತಮ ಬುದ್ಧ ಸತತ ಆರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಲೋಕದಲ್ಲಿ ದುಃಖವಿದ್ದು ಆ ದುಃಖಕ್ಕೆ ಕಾರಣವಿದೆ. ಆ ಕಾರಣಕ್ಕೆ ಕಾರ್ಯವಿದೆ .ಕಾರ್ಯಕ್ಕೆ ಸಂಬಂಧವಿದೆ ಎನ್ನುವುದನ್ನು ಇಡೀ ಜಗತ್ತಿಗೆ ಸಾರಿದ್ದಾರೆ ಎಂದರು. ಗೌತಮ ಬುದ್ಧರು ಮಾನವನಿಗೆ ಜ್ಞಾನ ಮತ್ತು ಸತ್ಯ ಬೋಧನೆ ಮಾಡಿ ಶರಣ ಹೋಗಿ ಎಂದು ತಿಳಿ ಹೇಳಿದ್ದಾರೆ. ಗೌತಮ ಬುದ್ಧರು ಅಷ್ಟಾಂಗ ಮಾರ್ಗಗಳು ಎಲ್ಲಾ ವ್ಯಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದು ಹೇಳಿದ್ದಾರೆ ಎಂದರು.
ಧ್ಯಾನ ಮಾರ್ಗದಿಂದ ಮಾನವನಿಗೆ ಸುಖ-ಶಾಂತಿ ಸಿಗುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಬುದ್ಧರನ್ನು ಮನೆಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು .

18 ರಿಂದ 25 ವರ್ಷದೊಳಗಿನ ಯುವಜನರು ,ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸ ಬಹುದಾಗಿದ್ದು ,ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 25000 ನಗದು ದ್ವಿತೀಯ ಬಹುಮಾನ ಹದಿನೈದು ಸಾವಿರ ಹಾಗೂ ತೃತೀಯ ಬಹುಮಾನ ಹತ್ತು ಸಾವಿರ ರೂಪಾಯಿ ನಗದು ಜೊತೆಗೆ ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದರು.

ಆಸಕ್ತರು ಸೆಪ್ಟೆಂಬರ್ 25ರೊಳಗೆ ಸ್ಪಷ್ಟವಾಗಿ ಕನ್ನಡದಲ್ಲಿ ಆರು ಪುಟಗಳಲ್ಲಿ ಪ್ರಬಂಧ ಬರೆದು ನಕಲು ಮಾಡಿಸಿ ಅಂಚೆ ಮೂಲಕ ಮೂರು ಪ್ರತಿಗಳನ್ನು ಬುದ್ಧ ಭಾರತ ಫೌಂಡೇಶನ್, ಸುಂದರಪ್ಪ ಬಿಲ್ಡಿಂಗ್ ಸುಭಾಷ್ ನಗರ 8ನೇ ತಿರುವು ಮಂಡ್ಯ ನಗರ ಇಲ್ಲಿಗೆ ಕಳುಹಿಸಿ ಕೊಡುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ಸುರೇಂದ್ರನಾಥ್, ಥಾಮಸ್, ಅಮ್ಜದ್ ಪಾಷಾ, ಗಂಗರಾಜು, ಪ್ರದೀಪ್ ಗೌಡ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!