Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| 8 ಕಾಲುಗಳು, 2 ತಲೆಗಳುಳ್ಳ ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ!

ಕೆ.ಆರ್.ಪೇಟೆ ತಾಲ್ಲೂಕಿನ ಚಟ್ಟೇನಹಳ್ಳಿ ಗ್ರಾಮದ ಶಿವಲಿಂಗಯ್ಯ ಎಂಬುವವರಿಗೆ ಸೇರಿದ ಎಮ್ಮೆಯೊಂದು ಇಂದು ವಿಚಿತ್ರವಾದ ಕರುವಿಗೆ ಜನ್ಮ ನೀಡಿದ್ದು, ಈ ಕರುವು 8 ಕಾಲುಗಳು, 2 ತಲೆಗಳು ಹಾಗೂ 2 ಬಾಲಗಳನ್ನು ಹೊಂದಿರುವುದು ವಿಶೇಷವಾಗಿದೆ.

ಎಮ್ಮೆಗೆ ಇಂದು ಬೆಳಿಗ್ಗೆಯಿಂದಲೇ ಪ್ರಸವ ಬೇನೆ ಕಾಣಿಸಿಕೊಂಡು ಒದ್ದಾಡಲು ಶುರು ಮಾಡಿತು, ನಂತರ ಪಶು ವೈದ್ಯರನ್ನು ಕರೆಸಲಾಯಿತು, ಆದರೆ ಎಷ್ಟು ಹೊತ್ತಾದರೂ ಕರು ಹೊರ ಬರಲೇ ಇಲ್ಲ. ನಂತರ ಮತ್ತೊಬ್ಬ ಪಶು ವೈದ್ಯರನ್ನು ಕರೆಸಲಾಯಿತು, ಅವರು ಎಮ್ಮೆಗೆ ಆಪರೇಷನ್ ಮಾಡಿ ಕರುವನ್ನು ಹೊರತೆಗೆದರು. ಆದರೆ ಆ ಕುರುವಿನ ವಿಚಿತ್ರ ರೂಪವನ್ನು ಕಂಡು ಗ್ರಾಮಸ್ಥರು ಎಲ್ಲರೂ ಆಶ್ಚರ್ಯ ಚಕಿತರಾದರು. ಸ್ವಲ್ವ ಸಮಯದ ನಂತರ ವಿಚಿತ್ರ ಕರುವು ಸಾವನ್ನಪಿತು. ಆದರೆ ಎಮ್ಮೆಯು ಬದುಕುಳಿದೆ.

ಎಮ್ಮೆಯ ಗರ್ಭಾಧಾರಣೆ ಸಮಯದಲ್ಲಿ ಆರೋಗ್ಯಕರ ವೀರ್ಯಾಣು ಅಥವಾ ಏಕಾಕಲಕ್ಕೆ ಎರಡೆರಡು ವೀರ್ಯ ಸೇರಿದಾಗ ಈ ರೀತಿಯ ಕರುಗಳು ಹುಟ್ಟುವ ಸಾಧ್ಯತೆ ಇರುತ್ತದೆ. ಅತ್ಯಾಧುನಿಕ ಪರೀಕ್ಷೆಗಳ ಮೂಲಕ ಇದನ್ನು ಮೊದಲೇ ಪರೀಕ್ಷಿಸಿದ್ದರೆ, ಈ ರೀತಿಯ ವಿಚಿತ್ರ ಕರುಗಳು ಹುಟ್ಟುವುದನ್ನು ತಡೆಯಬಹುದು. ಆದರೆ ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲದೇ ಇರುವ ಕಾರಣ ಈ ರೀತಿಯ ಸಂಗತಿಗಳು ಇಂದು ಎಲ್ಲೆಡೆ ಸಂಭವಿಸುತ್ತಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!