Tuesday, September 17, 2024

ಪ್ರಾಯೋಗಿಕ ಆವೃತ್ತಿ

ಚಾಲಕರಿಗೆ ಶಿಸ್ತು ಕಲಿಸುತ್ತಿರುವ ಕ್ಯಾಮೆರಾಗಳು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ ಹೊಸದಾಗಿ ಸ್ಥಾಪಿಸಿರುವ 60  AI ಕ್ಯಾಮೆರಾಗಳು ಚಾಲಕರಿಗೆ ಶಿಸ್ತನ್ನು ಕಲಿಸುತ್ತಿವೆ.

ಬೆಂಗಳೂರಿನಿಂದ ಮೈಸೂರಿಗೆ ಸಂಪರ್ಕವನ್ನು ಏರ್ಪಾಡಿಸುವ ಹೊಸ ಹೈವೆಯಲ್ಲಿ ಪೋಲಿಸರು, ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರು, ಚಾಲಕರು ಮಾತ್ರ ರೇಸ್ ಗೆ ಬಿಟ್ಟವರಂತೆ ಗಂಟೆಗೆ 150 ರಿಂದ 180 ಕಿಮೀ ತನಕ ಚಾಲನೆ ಮಾಡಿ ಅಪಘಾತಕೊಳಗಾಗಿ ಜೀವ ಮತ್ತು ಸ್ವತ್ತುಗಳ ನಷ್ಟ ಮಾಡಿಕೊಳ್ಳುತ್ತಿದ್ದರು. ಸದರಿ ಎಕ್ಸ್‌ಪ್ರೆಸ್‌ ಹೈವೆಯನ್ನು ಕೇವಲ 100 ಕಿಮೀ ವೇಗಕ್ಕೆ ಅಭಿವೃದ್ಧಿ ಪಡಿಸಿದ್ದು ಅದಕ್ಕಿಂತ ಹೆಚ್ಚಿನ ವೇಗ ಪಡೆದರೆ ತಡೆಯುವ ಶಕ್ತಿ ಹೈವೆಗೆ ಇರಲಿಲ್ಲ.

ಇದಕ್ಕೆ ಸರ್ಕಾರ ಹೈವೆಯ ಉದ್ದಕ್ಕೂ AI ಕ್ಯಾಮೆರಾಗಳನ್ನು ಸ್ಥಾಪಿಸಿದ್ದು ಕೇವಲ ವೇಗದ ಮಿತಿ ಮಿರಿದರೆ ಅಷ್ಟೇ ಅಲ್ಲ, ಲೈನ್ ಉಲ್ಲಂಘಿಸಿದರೆ, ಚಾಲನೆಯಲ್ಲಿ ಮೊಬೈಲ್ ಬಳಸಿದರೆ, ಸೀಟ್ ಬೆಲ್ಟ್ ಹಾಕದಿದ್ದರೆ ಎಲ್ಲವನ್ನೂ ಪೋಟೋ ತೆಗೆದು ದಂಡ‌ ಹಾಕುತ್ತಿದ್ದು ಇದರಿಂದ ಎಚ್ಚರ ಗೊಂಡಿರುವ ವಾಹನ ಮತ್ತು ಕಾರಿನ ಚಾಲಕರು ಬಹುತೇಕ ನಿಯಮಗಳನ್ನು ಪಾಲಿಸುತ್ತಿದ್ದು ಇದರಿಂದ ಅಪಘಾತಗಳ ಸಂಖ್ಯೆ ಸಹ ಕಡಿಮೆಯಾಗುತ್ತಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!