Friday, September 20, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಗತವೈಭವಕ್ಕೆ ಪ್ರಾಮಾಣಿಕ ಪ್ರಯತ್ನ- ಸಿ.ಡಿ.ಗಂಗಾಧರ್

ಮೈಸೂರು ಆರಸರ ದೂರದೃಷ್ಠಿಯಿಂದ ಸ್ಥಾಪಿತವಾಗಿ ಜಿಲ್ಲೆಯ ರೈತರ ಜೀವನಾಡಿ ಹಾಗೂ ರಾಜ್ಯದ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಸ್ತುತ ಸಂಕಷ್ಟದಲ್ಲಿರುವ ಮೈಷುಗರ್ ಕಾರ್ಖಾನೆಯ ಹಿಂದಿನ ಗತವೈಭವ ಮರುಕಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ನೂತನ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ನೇಮಕ ಕುರಿತು ಪ್ರತಿಕ್ರಿಯಿಸಿದ ಅವರು, ಮೈಷುಗರ್ ಕಾರ್ಖಾನೆಗೆ ತನ್ನದೇ ಆದ ಗತವೈಭವವಿದೆ. ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಜಿ.ಮಾದೇಗೌಡ, ಕೆ.ಎನ್.ನಾಗೇಗೌಡ, ಎಂ.ಲಿಂಗಯ್ಯ, ಹೆಚ್.ಹೊನ್ನಪ್ಪ, ಎಂ.ಡಿ.ರಮೇಶ್ ರಾಜುರವರು ಕಾರ್ಖಾನೆಯ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅದೇ ಸಾಲಿನಲ್ಲಿ ಕಾರ್ಖಾನೆಯ ಅಭ್ಯುದಯಕ್ಕೆ ಶ್ರಮಿಸುವ ಇರಾದೆ ನನ್ನದು ಎಂದು ಅಭಿಪ್ರಾಯಿಸಿದರು.

ನನ್ನ ನೇಮಕಕ್ಕೆ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಶಾಸಕರುಗಳಿಗೆ ಅಭಾರಿಯಾಗುವುದಾಗಿ ಧನ್ಯವಾದ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚುನಾವಣಾ ಆಶ್ವಾಸನೆ ಹಾಗೂ ಉಸ್ತುವಾರಿ ಸಚಿವರ ಒತ್ತಾಸೆಯಂತೆ ನೂತನ ಮೈಷುಗರ್ ಕಾರ್ಖಾನೆ ಆರಂಭದ ಘೋಷಣೆ ಮಾಡಿದ್ದಾರೆ. ಸ್ಥಳೀಯ ಶಾಸಕರುಗಳ ಸಹಕಾರದಿಂದ ನಾನೂ ಓರ್ವ ಕಾರ್ಖಾನೆಯ ಒಪ್ಪಿಗೆದಾರನಾಗಿ ನೂತನ ಕಾರ್ಖಾನೆ ಸ್ಥಾಪನೆ ಮೂಲಕ ರೈತರು ಮತ್ತು ಕಾರ್ಮಿಕರ ಹಿತ ರಕ್ಷಿಸಿ, ಕಾರ್ಖಾನೆ ವ್ಯಾಪ್ತಿಯ ಆಸ್ತಿ-ಪಾಸ್ತಿಗಳ ರಕ್ಷಣೆ ಜೊತೆಗೆ ಕಾರ್ಖಾನೆಗೆ ವಂಚಿಸಿದವರ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮತ್ತು ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿ, ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಣೆ.

2006ರಲ್ಲಿ ಜರುಗಿದ ದಕ್ಷಿಪಕ್ಷ ನಿಷ್ಠೆಗೆ ಒಲಿದ ಮೈಷುಗರ್ ಅಧಿಕಾರ

ಸಿ.ಡಿ.ಗಂಗಾಧರ್ ಮೂಲತಃ ‘ಕೈ’ ಕಟ್ಟಾಳು ಮಂಡ್ಯ ತಾಲ್ಲೂಕಿನ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿಯ ಚಂದಗಾಲು ಗ್ರಾಮದ ರೈತಾಪಿ ಕುಟುಂಬದ ಹಿನ್ನಲೆ ಹೊಂದಿದ್ದು, ಬಿ.ಎಸ್ಸಿ ಹಾಗೂ ಎಂ.ಎ ಅಧ್ಯಯನದಲ್ಲಿ ಇತಿಹಾಸ ಶಾಸ್ತ್ರದ ಪದವಿ ಪೂರೈಸಿದ್ದಾರೆ. 

ಮಾಜಿ ಶಾಸಕ ಹೆಚ್.ಬಿ.ರಾಮು ಅವರ ಒಡನಾಡಿಯಾಗಿ 1999ರಲ್ಲಿ ರಾಜಕೀಯ ರಂಗ ಪ್ರವೇಶಿಸಿ ಅಂದು ಜರುಗಿದ ಲೋಕಸಭಾ ಚುನಾವಣೆಯಲ್ಲಿ ಸಂಸದ ಅಂಬರೀಶ್, ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೆಚ್.ಬಿ.ರಾಮು ಅವರ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯ ಕೆಲಸ ಮಾಡಿದ್ದರು.

ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅಧಿಕಾರಾವಧಿಯ 2000 ಇಸವಿಯಲ್ಲಿ ಜರುಗಿದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೊಳಲು ಜಿ.ಪಂ.ಕ್ಷೇತ್ರದಿಂದ ಸ್ಪರ್ಧಿಸಿ ಚೊಚ್ಚಲ ಗೆಲುವು

ಣ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ. ಪಕ್ಷೇತರ ಅಭ್ಯರ್ಧಿಯಾಗಿದ್ದ ಹಾಲಿ ಪರಿಷತ್ ಸದಸ್ಯ ಮರಿತಿಬ್ಬೇಗೌಡರ ಎದುರು ಪರಾಭವ

2008ರಲ್ಲಿ ಕೆಪಿಸಿಸಿ ಸದಸ್ಯರಾಗಿ ನಿಯೋಜನೆ, ನಂತರ ಶಿಕ್ಷಕರು ಮತ್ತು ಪದವೀಧರರ ಕೆಪಿಸಿಸಿ ಘಟಕದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಣೆ.

2017ರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಾರಥ್ಯದಲ್ಲಿ ಕಾರ್ಯ ನಿರ್ವಹಣೆಗೆ ನೇಮಕಾತಿ ಆದೇಶ.

ಡಿಸಿಸಿ ಹುದ್ದೆಗೆ ಪ್ರಬಲ ಪೈಪೋಟಿ ನಡೆಸಿದ ರಾಜಕೀಯ ಗುರು ಹೆಚ್.ಬಿ.ರಾಮು ಅವರನ್ನು ಮಣಿಸಿ ಹುದ್ದೆ ಪಡೆಯುವಲ್ಲಿ ಚಾಣಾಕ್ಷತೆ ಮೆರೆದ ಯುವ ಸಾರಥಿ.

2023ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸ್ಥಳೀಯ ಕಾರ್ಯಕರ್ತರು, ಮುಖಂಡರು ಹಾಗೂ ಮಾಜಿ ಸಚಿವರು, ಶಾಸಕರೊಂದಿಗೆ ಸತತ ಪ್ರಯತ್ನ ಇದರ ಫಲವಾಗಿ ಜಿಲ್ಲೆ 6 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಹಾಗೂ ಬೆಂಬಲಿತ ಶಾಸಕರುಗಳ ಆಯ್ಕೆ.

2024 ರಾಜ್ಯದ ಪ್ರತಿಷ್ಠಿತ ಮೈಷುಗರ್ ಕಾರ್ಖಾನೆಯ ಅಧ್ಯಕ್ಷಗಿರಿ 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!