Wednesday, July 24, 2024

ಪ್ರಾಯೋಗಿಕ ಆವೃತ್ತಿ

ಸಂಭ್ರಮದ ಕಾಳಮ್ಮ- ಮಾರಮ್ಮ ಪೂಜಾ ಮಹೋತ್ಸವ

ಮಂಡ್ಯ ನಗರದ ಎಸ್. ಹೊನ್ನಯ್ಯ ಬಡಾವಣೆಯಲ್ಲಿ ಶ್ರೀ ಕಾಳಮ್ಮ ಮತ್ತು ಆದಿಶಕ್ತಿ ಮಾರಮ್ಮ ಪೂಜಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

ಹಬ್ಬದ ಹಿನ್ನಲೆಯಲ್ಲಿ ಮುಂಜಾನೆಯಿಂದಲೇ ಜನರು ಸಾಮೂಹಿಕವಾಗಿ ಜಮಾವಣೆಗೊಂಡು ತಂಬಿಟ್ಟಿನ ಆರತಿಯೊಂದಿಗೆ ಶ್ರೀ ಕಾಳಮ್ಮ ಮತ್ತು ಆದಿಶಕ್ತಿ ಮಾರಮ್ಮನಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಯುವ ಮುಖಂಡ ಶ್ಯಾಮ್ ಮಾತನಾಡಿ, ನಮ್ಮ ಪೂರ್ವಿಕರ ಸಂಪ್ರದಾಯದಂತೆ ನಾವೂ ಕೂಡ ಗ್ರಾಮ ದೇವತೆಗಳಾದ ಶ್ರೀ ಕಾಳಮ್ಮ ಮತ್ತು ಆದಿಶಕ್ತಿ ಮಾರಮ್ಮನ ಮಹೋತ್ಸವ ಮುಂದುವರಿಸಿಕೊಂಡು ಸಾಗುತ್ತಿದ್ದೇವೆ.ಹಬ್ಬದ ಸಂದರ್ಭದಲ್ಲಿ ದೂರದಲ್ಲಿರುವ ಬಂಧು-ಬಳಗ ಸಂತಸದಿಂದ ಒಂದಡೆ ಒಗ್ಗೂಡಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಮುಖಂಡ ಡಾ.ಹೆಚ್.ಕೃಷ್ಣ ಮಾತನಾಡಿ ಗ್ರಾಮ ದೇವತೆಗಳಾದ ಶ್ರೀ ಕಾಳಮ್ಮ ಮತ್ತು ಆದಿಶಕ್ತಿ ಮಾರಮ್ಮ ಪೂಜಾ ಮಹೋತ್ಸವದಲ್ಲಿ ಎಲ್ಲಾ ಸಮುದಾಯದ ಜನ ಉತ್ಸಾಹದಿಂದ ಪಾಲ್ಗೊಂಡಿರುವುದು ಸಂತಸದ ಸಂಗತಿ ಎಂದರು.

ಹಬ್ಬದ ಸಂದರ್ಭದಲ್ಲಿ ವಿವಿಧ ಸಮುದಾಯದ ಜನರೆಲ್ಲಾ ಒಂದೆಡೆ ಸೇರಿ ಒಗ್ಗೂಡುವುದರಿಂದ ಶಾಂತಿ- ಸಹಬಾಳ್ವೆಗೆ ಮುನ್ನುಡಿಯಾಗುತ್ತದೆ ಎಂದು ತಿಳಿಸಿದರು.

ಯುವ ಮುಖಂಡರಾದ ವೆಂಕಟೇಶ್,ಅಂದಾನಿ, ನಾಗರಾಜು, ಚನ್ನರಾಜು, ರಾಜಣ್ಣ, ಸಂತೋಷ್, ಉಮೇಶ್, ಚಿಕ್ಕಮಂಡ್ಯ ವೇಣುಗೋಪಾಲ್ ಸೇರಿದಂತೆ ಹಿರಿಯ ಯಜಮಾನರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!