Wednesday, September 18, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರ ಬಜೆಟ್ : ಬಂಗಾರದ ಜೊತೆ ರೆಡಿಮೆಡ್ ಬಟ್ಟೆ, ಸಿಗರೇಟ್ ದುಬಾರಿ

ಬುಧವಾರ ಮಂಡನೆಯಾದ ಕೇಂದ್ರ ಬಜೆಟ್ ಆಭರಣ ಪ್ರಿಯ ಮಹಿಳೆಯರ ಪಾಲಿಗೆ ಕೊಂಚ ದುಬಾರಿ ಎನಿಸಿದೆ. ಚಿನ್ನ, ಬೆಳ್ಳಿ, ವಜ್ರದ ದರ ಏರಿಕೆ ಘೋಷಿಸಲಾಗಿದೆ. ಈ ಹಿಂದೆ ಇದ್ದ ದರಗಳಲ್ಲಿ ಶೇ.1ರಷ್ಟು ಏರಿಕೆ ಕಂಡಿದೆ.‌ ಹೀಗಾಗಿ ಇವುಗಳ ಖರೀದಿ ಹಾಗೂ ಚಿನ್ನಾಭರಣದ ಮೇಲೆ ಹೂಡಿಕೆ ಮಾಡುವ ವರ್ಗಕ್ಕೆ ನಿರಾಸೆಯಾಗಿದೆ.

ಮತ್ತೊಂದೆಡೆ ಮೊಬೈಲ್ ತಯಾರಕರು ಹಾಗು ಬಳಕೆದಾರರಿಗೆ ಸಿಹಿಸುದ್ದಿ ನೀಡಿರುವ ಕೇಂದ್ರ ಸರ್ಕಾರ, ಮೊಬೈಲ್ ಕ್ಯಾಮರಾ ಲೆನ್ಸ್ ಗಳ ದರ ಇಳಿಕೆ ಮಾಡಿದೆ. ಮಲ್ಟಿ ಟಾಸ್ಕ್, ಹಾಗೂ ಹೈ ಕ್ವಾಲಿಟಿ ಫೋಟೋ ಸಲುವಾಗಿ ಮೊಬೈಲ್ ಫೋಟೋಗ್ರಫಿ ಅವಲಂಬಿಸಿದ್ದ ವರ್ಗಕ್ಕೆ ಇದು ವರದಾನವಾಗಿದೆ. ದುಬಾರಿ ಮೊಬೈಲ್ಗಳ ಬೆಲೆಯಲ್ಲಿ ಕೊಂಚ ಇಳಿಕೆ ಕಾಣಲಿದೆ.

ಸ್ಮಾರ್ಟ್ ಟಿವಿ ಹಾಗೂ ಸ್ಮಾಟ್ ಕಲಿಕೆ ವರ್ಗ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಮಾದರಿಯ ಟಿವಿಗಳ ಬೆಲೆಯಲ್ಲೂ ಇಳಿಕೆ ಮಾಡಲಾಗಿದೆ.

ಉಳಿದಂತೆ ಸಿಗರೇಟ್, ಪ್ಯಾಟಿನಂ, ರೆಡಿಮೆಡ್ ಬಟ್ಟೆಗಳು ಮತ್ತಷ್ಟು ದುಬಾರಿಯಾಗಲಿದೆ. ಸಿಗರೇಟ್‌ ಮೇಲಿನ ತೆರಿಗೆ 16% ಏರಿಕೆಯಾಗಿದ್ದು, ಇದರಿಂದ ಪ್ರತಿ ಸಿಗರೇಟ್‌ನ ಬೆಲೆಯಲ್ಲಿ ಶೇ 2% ರವರೆಗೆ ಬದಲಾವಣೆಯಾಗಲಿದೆ. ಉಳಿದಂತೆ ಬ್ಲೆಂಡೆಡ್ ಸಿಎನ್‌ಜಿಗೆ ಕಸ್ಟಮ್ಸ್ ಸುಂಕ ರದ್ದಾಗಿದೆ. ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆ. ವಿದೇಶಿ ವಾಹನಗಳ ಆಮದು ಕಾರ್ಯವೂ ಇನ್ನೂ ದುಬಾರಿಯಾಗಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!