Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ನಾಶ: ರವಿಕುಮಾರ್

ಕೃಷಿ ಭೂಮಿಗೆ ಅತಿಯಾದ ರಾಸಾಯನಿಕ ಬಳಕೆ ಮಾಡುವುದರಿಂದ ಭೂಮಿಯು ಫಲವತ್ತತೆ ಕಳೆದುಕೊಳ್ಳುತ್ತದೆ ಎಂದು ಶಾಸಕ ಪಿ.ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.

ಮಂಡ್ಯನಗರದ ಹರಿಪ್ರಿಯ ಹೋಟೆಲ್ ನಲ್ಲಿ ನಡೆದ ‘ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ’ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ 8 ಲಕ್ಷ ಹೆಕ್ಟೇರ್ ಭೂಮಿ ಫಲವತ್ತತೆ ಕಳೆದುಕೊಂಡಿದೆ‌. ಅತಿಹೆಚ್ಚು
ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಇದರಿಂದ ನಾವು ತಿನ್ನುವ ಆಹಾರದಲ್ಲಿ ವಿಷವನ್ನು ಸೇವಿಸುತ್ತಿದ್ದೇವೆ. ಇದಕ್ಕೆ ಕಾರಣ ಜನಸಂಖ್ಯೆ, ಹವಾಮಾನ ವೈಪರೀತ್ಯ ಕಾರಣವಾಗುತ್ತಿದೆ ಎಂದರು.

ನಾಡಿನಿಂದ ಕಾಡು ನಾಶವಾಗುತ್ತಿದೆ, ಇದರಿಂದ ತಾಪಮಾನ ಹೆಚ್ಚುತ್ತಿದೆ, ಆಗಾಗಿ ಪ್ರತಿಯೊಬ್ಬರು ಗಿಡ ನೇಡಬೇಕು. ಇದರಿಂದ ತಾಪಮಾನ ಕಡಿಮೆಯಾಗುತ್ತದೆ. ಪರಿಸರದ ಅಭಿವೃದ್ಧಿಯು ಆಗುತ್ತದೆ ಎಂದರು.

ವಿಕಸನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರ ಮಹೇಶ್ ಚಂದ್ರಗುರು ಮಾತನಾಡಿ, ಹವಾಮಾನ ವೈಪರೀತ್ಯ ಮತ್ತು ಜಾಗತಿಕ ಸಮಸ್ಯೆಯಿಂದ ಜೀವ ವೈವಿಧ್ಯತೆ ಸಂಕಷ್ಟಕ್ಕೆ ಒಳಗಾಗಿದೆ. ಈ ಎಲ್ಲವನ್ನು ಕುರಿತು ಕಾರ್ಯಗಾರದಲ್ಲಿ ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಕೊಡಲಾಗುವುದು. ಮುಂದಿನ ಐದು ವರ್ಷದಲ್ಲಿ ಹೇಗೆ ನಾವು ನಮ್ಮ ರಾಜ್ಯವನ್ನು ಜಾಗತಿಕ ಸಮಸ್ಯೆಯಿಂದ ಕಾಪಾಡವುದು ಎಂದು ತಿಳಿಯುತ್ತದೆ ಎಂದರು.

ಕಾರ್ಯಕ್ರಮ ಕಾರ್ಯಾಕ್ರಮಾಧಿಕಾರಿ ಮಂಜುನಾಥ್, ಕೋಲಾರ ಜಿಲ್ಲೆಯ ಗ್ರಾಮ ವಿಕಾಸ ಸಂಸ್ಥೆಯ ನಿರ್ದೇಶಕರಾದ ಎಂ.ವಿ.ಎನ್.ರಾವ್, ವಿಕಸನ ಸಂಸ್ಥೆಯ ಆಡಳಿತ ಉಪಾಧ್ಯಕ್ಷರಾದ ಶಬಿನ್ ತಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!