Thursday, September 19, 2024

ಪ್ರಾಯೋಗಿಕ ಆವೃತ್ತಿ

ಕರಾಟೆ ಪಂದ್ಯಾವಳಿ : ಕರಾಟೆ ತರಬೇತಿ ಶಾಲೆಯ ಮಕ್ಕಳ ಸಾಧನೆ

ಮಳವಳ್ಳಿ ಪಟ್ಟಣದಲ್ಲಿ ನಡೆದ ನ್ಯಾಷನಲ್ ಲೆವಲ್ ಓಪನ್ ಕರಾಟೆ ಚಾಂಪಿಯನ್ ಶಿಫ್‌ ಪಂದ್ಯಾವಳಿಯಲ್ಲಿ ಮಂಡ್ಯದ ನಿಯಾನ್ ಗೋಜುರಿಯೋ ಸ್ಫೋರ್ಟ್ಸ್ ಕರಾಟೆ ಅಕಾಡೆಮಿ ತರಬೇತಿ ಶಾಲೆಯ 15 ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗೈದು ಕೀರ್ತಿ ಜಿಲ್ಲೆಗೆ ತಂದಿದ್ದಾರೆ.

14ರಿಂದ 17ನೇ ವಯಸ್ಸಿನ ಒಳಗಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಕಟಾ ಹಾಗು ಕುಮುತೆ ಕರಾಟೆ ವಿಭಾಗದಲ್ಲಿ ಭಾಗವಹಿಸಿದ್ದ ಈ ತರಬೇತಿ ಶಾಲೆಯ 15 ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿ ಟ್ರೋಪಿ ಹಾಗೂ ಬಹುಮಾನ ಗಳಿಸಿದ್ದಾರೆ, ಅಲ್ಲದೇ ತಂಡದ ಸಾಧನೆಗೆ ಟೀಮ್ ಚಾಂಪಿಯನ್ಷಿಪ್ ಟ್ರೋಪಿ ಕೂಡ ದೊರೆತಿದೆ.

ಜಾಹೀರಾತು

ಚಾಂಪಿಯನ್ ಶಿಪ್‌ನಲ್ಲಿ ವೈಟ್,ಯಲ್ಲೋ, ಗ್ರೀನ್, ಬ್ರೌನ್, ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲಾ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿರುವುದಾಗಿ ಕರಾಟೆ ಅಕಾಡೆಮಿ ಶಾಲೆಯ ತರಬೇತುದಾರ ಪ್ರೇಮ್ ಕುಮಾರ್ ತಿಳಿಸಿದ್ದು, ಪ್ರಶಸ್ತಿ ಗೆದ್ದು ತರಬೇತಿ ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!