Friday, September 20, 2024

ಪ್ರಾಯೋಗಿಕ ಆವೃತ್ತಿ

ಭಗವಂತನ ಸೇವೆ ಮಾಡುವುದು ನಮ್ಮಗಳ ಕರ್ತವ್ಯ:ಚುಂಚಶ್ರೀ

ಮನುಷ್ಯ ಸಮಾಜದ ಸತ್ಕಾರ್ಯದಲ್ಲಿ ಭಾಗಿಯಾಗಿ ಆತ್ಮ ಶುದ್ಧಿಯೊಂದಿಗೆ ಭಗವಂತನ ಸೇವೆ ಮಾಡುವುದು ನಮ್ಮಗಳ ಕರ್ತವ್ಯವೆಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ತಿಳಿಸಿದರು.

ನಾಗಮಂಗಲ ತಾಲೂಕಿನ ಪಾಲಗ್ರಹಾರ ಗ್ರಾಮದಲ್ಲಿ ಶುಕ್ರವಾರ ಶ್ರೀ ನಾಚಾರಮ್ಮ ಬೃಂದಾವನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು .

nudikarnataka.com

ಪಾಲಗ್ರಹಾರದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾಣ ಪ್ರಸಿದ್ಧ ಶ್ರೀ ನಾಚಾರಮ್ಮ ಬೃಂದಾವನ ಇತಿಹಾಸ ಹೊಂದಿರುವ ಗ್ರಾಮದ ದೇವರಾಗಿದೆ. ಸಮಾಜದ ಹಿರಿಯರು ತೋರಿಸಿದ ಹಾದಿಯು ನಮಗೆ ಇಂದು ಸ್ಪೂರ್ತಿದಾಯಕವಾಗಿದೆ. ನಾಚಾರಮ್ಮ ದೇವಿ ಸಮಾಜದ ಬೆಳಕಿಗೆ ನೆಲೆಯಾಗಿ ನಿಂತಿರುವುದಕ್ಕೆ ಗ್ರಾಮದ ಇತಿಹಾಸದ ಪ್ರೇರಣಶಕ್ತಿಗಳು ಸಾಕ್ಷಿ ಭೂತವಾಗಿವೆ.ಹಿರಿಯರ ಆದರ್ಶದ ಬದುಕಿನಲ್ಲಿ ಆತ್ಮ ಶುದ್ಧಿಯೊಂದಿಗೆ ಬದುಕುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿರವರು ದೇವರ ಕೈಕಂರ್ಯಗಳೊಂದಿಗೆ ಕಳಸ ಪ್ರತಿಷ್ಠಾಪನೆ ಮಾಡಿ ಲೋಕಾರ್ಪಣೆ ಮಾಡಿದರು. ಗ್ರಾಮದಲ್ಲಿ ಪೂರ್ಣ ಕುಂಭ ಕಳಸವನ್ನು ಮೆರವಣಿಗೆ ಮಾಡಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!