Thursday, September 19, 2024

ಪ್ರಾಯೋಗಿಕ ಆವೃತ್ತಿ

ನಗರದ ಸ್ವಚ್ಛತೆಗೆ ಆದ್ಯತೆ ನೀಡಿ | ಬಿಜೆಪಿ ಮುಖಂಡ ಅಶೋಕ್ ಜಯರಾಂ

ಮಂಡ್ಯ ನಗರದ ನಾಗರೀಕರ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಬಿಜೆಪಿ ಮುಖಂಡ ಅಶೋಕ್ ಜಯರಾಂ ಮನವಿ ಮಾಡಿದರು.

ಮಂಡ್ಯ ನಗರದ ಕುವೆಂಪು ನಗರದಲ್ಲಿರುವ ವಿನಾಯಕ ಉದ್ಯಾನವನದಲ್ಲಿ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಮಂಡ್ಯ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಂಡ್ಯ ನಗರದಲ್ಲಿರುವ ಸರ್ಕಾರಿ ಉದ್ಯಾನವನಗಳಲ್ಲಿ ನಿರಂತರಾಗಿ ಸ್ವಚ್ಛತಾ ಅಭಿಯಾನ ಮಾಡುತ್ತಿದ್ದೇವೆ.ಇಂದು 17ನೇ ವಾರ್ಡ್ ನಲ್ಲಿರುವ ವಿನಾಯಕ ಉದ್ಯಾನವನ ಪಾರ್ಕ್‌ನಲ್ಲಿರುವ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್, ಅನಗತ್ಯ ಸಸ್ಯಗಳನ್ನು ಸ್ಥಳೀಯ ಸಾರ್ವಜನಿಕರು, ಕಾರ್ಯಕರ್ತರೊಡನೆ ತೆರೆವುಗೊಳಿಸಲಾಯಿತು ಎಂದರು.

ಬಹುತೇಕ ಉದ್ಯಾನಗಳಲ್ಲಿ ಮಹಿಳಾ ನಾಗರೀಕರು, ವಾಯುವಿಹಾರಿಗಳು ಸಂಚರಿಸುತ್ತಾರೆ, ಮಕ್ಕಳು ಆಟದ ಪರಿಕರಗಳನ್ನು ಬಳಸುತ್ತಾರೆ, ಸಾಕಷ್ಟು ನಿರ್ಲಕ್ಷಕ್ಕೆ ಒಳಗಾಗಿರುವ ಉದ್ಯಾವನಗಳಲ್ಲಿ ನಾವು ಸ್ವಚ್ಛತಾ ಶ್ರಮದಾನ ಮಾಡಿ, ನಾಗರಿಕರು ಆರೋಗ್ಯದ ಅನೂಕಲಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಈ ಉದ್ಯಾವನವನ್ನು ಪ್ಲಾಸ್ಟಿಕ್ ಮುಕ್ತ, ಅನೈತಿಕ ಚಟುವಟಿಕೆ ಮುಕ್ತ ತಾಣವನ್ನಾಗಿ ಮಾಡಲು ನಗರಸಭೆಗೆ ಮನವಿ ಮಾಡುತ್ತೇನೆ. ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರೀಕರ ಸಹಕಾರದೊಡನೆ ಪ್ರತಿಭಾನುವಾರ ಮಂಡ್ಯ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ, ಈಗಾಗಲೇ 8 ಉದ್ಯಾನವನಗಳಲ್ಲಿ ಅಭಿಯಾನ ನಡೆಸಿ, ಪ್ಲಾಸ್ಟಿಕ್ ಮುಕ್ತ ಪಾರ್ಕ್ ಎಂದು ಘೋಷಣಾ ಫಲಕವನ್ನು ಹಾಕಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ನಿತ್ಯಾನಂದ, ಮುಖಂಡ ಶಶಿ, ಸ್ಥಳೀಯ ಮಾರ್ಗದರ್ಶಕ ರಾಮಣ್ಣ, ತಾ.ಪಂ.ಮಾಜಿ ಸದಸ್ಯ ಸಿದ್ದಪ್ಪ, ಡೈರಿ ಸಿದ್ದೇಗೌಡ, ಗ್ರಾ.ಪಂ.ಸದಸ್ಯ ಅನಿಲ್, ರವಿ, ನಗರಸಭೆ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಪೌರಕಾರ್ಮಿಕರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!