Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರವೇ ಅಂತಿಮ: ನರೇಂದ್ರಸ್ವಾಮಿ

ಕಾಂಗ್ರೆಸ್ ಪಕ್ಷದಲ್ಲಿ ಯಾರು ಏನೇ ಹೇಳಿಕೆ ನೀಡಿದರೂ ಅದು ನಡೆಯುವುದಿಲ್ಲ, ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರವೇ ಅಂತಿಮ ಹೊರತು ಮುಖಂಡ ಹೇಳಿಕೆ ಅಪ್ರಸ್ತುತ ಎಂದು ಶಾಸಕ ಪಿಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖಂಡರ ಒಲೈಕೆಗಾಗಿ ಮತನಾಡುವುದು ಅವರ ವಾಕ್ ಸ್ವತಂತ್ರವಾಗಿದೆ. ಆದರೇ ನನ್ನ ದೇಹದಲ್ಲಿ ಕಾಂಗ್ರೆಸ್ ರಕ್ತ ಹರಿದಾಡುತ್ತಿರುವುದರಿಂದ ಹೈಕಮಾಡ್ ನಿರ್ಧಾರಕ್ಕೆ ಬದ್ದನಾಗಿರುತ್ತೇನೆಂದು ಹೇಳಿದರು.

ಏನೇ ಮಾತನಾಡಿದರೂ ವ್ಯರ್ಥ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದರಿಂದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಸದ್ಯಕ್ಕೆ ಅವಶ್ಯಕತೆ ಇಲ್ಲ, ಇಲ್ಲಿ ಏನೇ ಮಾತನಾಡಿದರೂ ವ್ಯರ್ಥ, ಯಾರೇ ಆಗಲಿ ಮಧ್ಯಂತರ ಹೇಳಿಕೆ ಕೊಡುವುದು ಯೋಗ್ಯತೆನೂ ಇಲ್ಲ, ಅರ್ಹತೆನೂ ಇಲ್ಲ, ಸಚಿವರಾಗಲಿ, ಶಾಸಕರಾಗಲಿ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಸುಪ್ರಿಂ, ಹೈಕಮಾಂಡ್ ಹೇಳಿದ ರೀತಿಯಲ್ಲಿ ಎಲ್ಲಾರು ತಲೆ ಬಾಗಲೇ ಬೇಕು, ಇಲ್ಲಿ ಯಾರು ಹೆಚ್ಚು, ಕಮ್ಮಿ, ಒಲೈಕೆ ಎನ್ನುವುದು ಇಲ್ಲ, ನಮಗೆ ಒಬ್ಬ ನಾಯಕ ಇಷ್ಟ ಆಗಬಹುದು, ಮತ್ತೊಬ್ಬರು ಇಷ್ಟ ಆಗದೇ ಇರಬಹುವುದು, ಪಕ್ಷ ನಮ್ಮ ತಾಯಿ ಇದ್ದಂತೆ ಪಕ್ಷದ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆಂದು ತಿಳಿಸಿದರು.

ಬಿಜೆಪಿ ಪಕ್ಷದವರಿಂದ ಗೊಂದಲ

ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದ ಬಿಜೆಪಿ ಪಕ್ಷದವರು ಗೊಂದಲವನ್ನು ಸೃಷ್ಠಿಸುತ್ತಿದ್ದಾರೆ, ನಾನು ಕಾಂಗ್ರೆಸ್‌ನ ಶಿಸ್ತಿಯ ನಾಯಕನಾಗಿದ್ದು, ಕಾಂಗ್ರೆಸ್ ನಾಯಕಿ ಇಂದಿರಾಗಾAಧಿಯವರ ಹತ್ತಿರದಲ್ಲಿದ್ದು, ರಾಜೀವ್‌ಗಾಂಧಿಯವರ ಒಡನಾಟದಲ್ಲಿ ಬಾಗಿಯಾಗಿದ್ದೇನು, ಇಂದಿರಾಗಾAಧಿ ಅವರು ಸಾವನ್ನಪ್ಪಿದ ಸಂದರ್ಭದಲ್ಲಿ ಕೆಲವು ದಿನ ಊಟವನ್ನೇ ಬಿಟ್ಟಿದ್ದೇ, ಕಾಂಗ್ರೆಸ್ ನಲ್ಲಿ ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ, ಕಾಂಗ್ರೆಸ್‌ನ ನಿಷ್ಠೆ ಹೊಂದಿರುವುದರಿAದ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ಸಿಗಲಿದೆ, ದೇಶದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗ ಹಾಗೂ ಬಡವರು ಒಂದಾಗಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಆಶಯವಾಗಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!