Wednesday, July 24, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ : ಎ.ಎಂ.ನಳಿನಿಕುಮಾರಿ

ಹಿರಿಯ ನಾಗರಿಕರು ಹಾಗೂ ಹೆಣ್ಣು ಮಕ್ಕಳು ಹಲವಾರು ಕಾರಣಗಳಿಂದ ಬೇಗ ಕಾಯಿಲೆಗೆ ತುತ್ತಾಗುವುದರಿಂದ, ಅವರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿಕುಮಾರಿ ತಿಳಿಸಿದರು.

ಮಂಡ್ಯ ನಗರದ ಸೇವಾಕಿರಣ ಸಭಾಂಗಣದಲ್ಲಿ ಸೇವಾಕಿರಣ ಉಚಿತ ವೃದ್ಧಾಶ್ರಮ ಮತ್ತು ಸೇಂಟ್ ಜಾನ್ ಅಂಬುಲೆನ್ಸ್ (ಇಂಡಿಯಾ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ
ಹಿರಿಯರಿಗೆ ಕಾನೂನು ಅರಿವು ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಸುಮಾರು 54 ಲಕ್ಷ ಹಿರಿಯ ನಾಗರಿಕರು ಹಾಗೂ ಇಡೀ ಭಾರತದಲ್ಲಿ ಸುಮಾರು 5 ಕೋಟಿಗಿಂತ ಹೆಚ್ಚಿನ ಹಿರಿಯ ನಾಗರಿಕರು ಇದ್ದಾರೆ.ಅವರು ಬಹಳ ಬೇಗ ಆರೋಗ್ಯ ತಪ್ಪುತ್ತಾರೆ.ಆದ್ದರಿಂದ ಅವರ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಸೇವಾಕಿರಣ ವೃದ್ಧಾಶ್ರಮ ಅಧ್ಯಕ್ಷ ಬಿ.ಸಿ, ಶಿವಾನಂದ,
ಸೇವಾಕಿರಣ ವೃದ್ಧಾಶ್ರಮ ಕಾರ್ಯದರ್ಶಿ ಜಿ.ವಿ. ನಾಗರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಧನಂಜಯ, ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ರೋಹಿತ್‌ ಕುಮಾರ್,ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಚಿಕ್ಕನಾಗೇಗೌಡ , ಸೇಂಟ್ ಜಾನ್ ಅಂಬುಲೆನ್ಸ್ ಖಜಾಂಚಿ ಸಜ್ಜನ ಕೊಠಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!