Thursday, September 19, 2024

ಪ್ರಾಯೋಗಿಕ ಆವೃತ್ತಿ

ಸದಸ್ಯರಿಗೆ ಮಾಹಿತಿ ನೀಡದೇ ಬೇಸಿಗೆ ಶಿಬಿರ ಆಯೋಜನೆ : ಗ್ರಾ.ಪಂ.ಅಧ್ಯಕ್ಷೆ, ಪಿಡಿಓ ವಿರುದ್ಧ ಹಕ್ಕುಚ್ಯುತಿ ಆರೋಪ

ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಮಕ್ಕಳಿಗೆ ಆಹ್ವಾನವಿರಲಿ ಕನಿಷ್ಠ ಸದಸ್ಯರಿಗೂ ಮಾಹಿತಿ ನೀಡದೇ ಅಧ್ಯಕ್ಷರು- ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಕ್ಕುಚ್ಯುತಿ ಮಾಡಿರುವ ಘಟನೆ ವರದಿಯಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆದೇಶದಂತೆ ಬೇಸಿಗೆ ರಜೆ ಸಮಯದಲ್ಲಿ ಮಕ್ಕಳ‌ ಬೌದ್ದಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೇ.19ರಿಂದ 9 ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲು ಸೂಚಿಸಲಾಗಿತ್ತು. ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ನೇತೃತ್ವದಲ್ಲಿ 40 ಮಕ್ಕಳ ಹಾಜರಿಯೊಂದಿಗೆ ಶಿಬಿರ ನಡೆಸಲು ತಿಳಿಸಲಾಗಿತ್ತು. ಅದಕ್ಕೆ ಮಕ್ಕಳ‌ ಪೋಷಕರ ಸಂಪರ್ಕಿಸಿ ನೊಂದಣಿ ಮಾಡಬೇಕಿತ್ತು.

ಗ್ರಾಮ ಪಂಚಾಯತಿ ಸದಸ್ಯರು, ಸ್ವಸಹಾಯ ಸಂಘಗಳು ಹಾಗೂ ಮುಖಂಡರನ್ನು ಸಂಪರ್ಕಿಸಿ ಸಹಕಾರ ಪಡೆಯಲು ತಾಕೀತು‌ ಮಾಡಿದ್ದರೂ ಸದಸ್ಯರಾದ ತಮಗೂ ಮಾಹಿತಿ‌‌ ನೀಡಿಲ್ಲ ಎಂದು ಶುಕ್ರವಾರ ಮಧ್ಯಾಹ್ನ ಗ್ರಾಪಂ ಸದಸ್ಯೆ ಡಿ.ಶಿಲ್ಪಾಚಿ ಕ್ಕಲಿಂಗು ಆರೋಪಿಸಿದ್ದಾರೆ.

ಶುಕ್ರವಾರ 12 ಗಂಟೆ ಸುಮಾರಿನಲ್ಲಿ ಶಿಬಿರ ಉದ್ಘಾಟಿಸಿದ ಗ್ರಾಪಂ ಅಧ್ಯಕ್ಷೆ ಅರುಣ, ಕಾರ್ಯದರ್ಶಿ ಪವಿತ್ರ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಗೀತಾ ಅವರು ಪರಿಚಯ ಬಾಷಣ ಮಾಡಿ‌ ಮಕ್ಕಳನ್ನು ಮನೆಗೆ ಕಳುಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!