Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ನಾಯಕತ್ವದಲ್ಲಿ ಕ್ರಿಕೆಟ್ ಆಡಿದ್ದ ವಿರಾಟ್‌ ಕೊಹ್ಲಿ!

ತಮ್ಮ ಬಾಲ್ಯದ ಕ್ರಿಕೆಟ್ ದಿನಗಳನ್ನು ಮೆಲುಕು ಹಾಕಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ತಮ್ಮ ನಾಯಕತ್ವದಡಿ ಕ್ರಿಕೆಟ್‌ ಆಡಿದ್ದರು ಎಂದು ಹೇಳಿದ್ದಾರೆ.

ಮಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತೇಜಸ್ವಿ ಯಾದವ್‌, ಸ್ಥಳೀಯ ಮಟ್ಟದಲ್ಲಿ ಈಗಿನ ಭಾರತ ತಂಡದ ಸ್ಟಾರ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ ನನ್ನ ನಾಯಕತ್ವದಡಿ ಕ್ರಿಕೆಟ್ ಆಡಿದ್ದರು. ನನ್ನ ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ನನ್ನ ಕ್ರಿಕೆಟ್ ಜೀವವವನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ತಮ್ಮ ಎರಡೂ ಕಾಲುಗಳಿಗೆ ಗಾಯವಾದ ಕಾರಣ ಕ್ರಿಕೆಟ್‌ಗೆ ವಿದಾಯ ಹೇಳಬೇಕಾಯಿತು ಎಂದು ತಿಳಿಸಿದ್ದಾರೆ.

ಭಾರತ ತಂಡದಲ್ಲಿ ಆಡಿರುವ ಬಹುತೇಕ ಸ್ಟಾರ್‌ ಆಟಗಾರರು ನನ್ನ ಕ್ರಿಕೆಟ್ ಸಹಪಾಠಿಗಳು. ನಾನು ಕ್ರಿಕೆಟಿಗನಾಗಿದ್ದರೂ ಹಾಗೂ ವಿರಾಟ್‌ ನನ್ನ ತಂಡದಲ್ಲಿ ಆಡಿದ್ದರೂ ಯಾರೊಬ್ಬರು ಈ ಬಗ್ಗೆ ಮಾತನಾಡುವುದಿಲ್ಲ. ಕ್ರಿಕೆಟ್ ವೃತ್ತಿಪರನಾಗಿ ನಾನು ಉತ್ತಮವಾಗಿ ಕ್ರಿಕೆಟ್ ಆಡುತ್ತಿದೆ. ದೆಹಲಿಯ ಅಂಡರ್-15 ಮತ್ತು ನಂತರ ಅಂಡರ್-17 ತಂಡದಲ್ಲಿ ಆಡಿದ ಸಮಯ ಇದು. ಆ ದಿನಗಳಲ್ಲಿ ವಿರಾಟ್ ಕೊಹ್ಲಿ ತೇಜಸ್ವಿ ನಾಯಕತ್ವದಲ್ಲಿ ಆಡುತ್ತಿದ್ದರು.

ತೇಜಸ್ವಿ ಯಾದವ್ ದೆಹಲಿಯ ಆರ್‌ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. ಅವರ ಕ್ರಿಕೆಟ್ ವೃತ್ತಿಜೀವನವು ಅವರ ಶಾಲಾ ದಿನಗಳಿಂದಲೇ ಪ್ರಾರಂಭವಾಯಿತು. 13 ನೇ ವಯಸ್ಸಿನಲ್ಲಿ ಅವರು ದೆಹಲಿಯ ಅಂಡರ್-15 ತಂಡಕ್ಕೆ ಆಯ್ಕೆಯಾದರು. ಯಾದವ್ ತಮ್ಮ ವೃತ್ತಿಪರ ಕ್ರಿಕೆಟ್ ವೃತ್ತಿಜೀವನದಲ್ಲಿ 4 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರು ಕೇವಲ ಒಂದು ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರು. ಅದರಲ್ಲಿ ಅವರು 3 ರನ್ ಗಳಿಸಲು ಸಾಧ್ಯವಾಯಿತು. ಇದಲ್ಲದೆ, ಅವರು ತಮ್ಮ ಲಿಸ್ಟ್ ಎ ವೃತ್ತಿಜೀವನದಲ್ಲಿ 2 ಪಂದ್ಯಗಳನ್ನು ಮತ್ತು ಒಂದು ಪ್ರಥಮ ದರ್ಜೆ ಪಂದ್ಯವನ್ನೂ ಆಡಿದ್ದಾರೆ. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಆಡಿದ 7 ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆದಿದ್ದಾರೆ.

ಐಪಿಎಲ್ 2008 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ 8 ಲಕ್ಷ ರೂ.ಗೆ ಹಾರಾಜಾಗಿದ್ದರು. ನಾಲ್ಕು ಆವೃತ್ತಿಗಳಲ್ಲಿ ಅವರು ದೆಹಲಿ ತಂಡದ ಭಾಗವಾಗಿದ್ದರು. ಆದರೆ ಅವರಿಗೆ ಆಡಲು ಅವಕಾಶ ಸಿಗಲಿಲ್ಲ. 2011ರಲ್ಲಿ ಒಂದು ಆವೃತ್ತಿಗೆ ಅವರ ವೇತನ 8 ಲಕ್ಷದಿಂದ 10 ಲಕ್ಷಕ್ಕೆ ಏರಿಕೆಯಾಯಿತು.

“>

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!