Wednesday, September 18, 2024

ಪ್ರಾಯೋಗಿಕ ಆವೃತ್ತಿ

ಕದಲೂರು ಉದಯ್ ಜನ್ಮದಿನ: ಸಾವಿರಾರು ಜನರ ಆರೋಗ್ಯ ತಪಾಸಣೆ

ಸಮಾಜ ಸೇವಕ ಕದಲೂರು ಉದಯ್ ಜನ್ಮದಿನವನ್ನು ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.ಇಂದು ಉದಯ್ ಅವರ ಜನ್ಮದಿನದ ಅಂಗವಾಗಿ ಆರೋಗ್ಯ ಶಿಬಿರ ಆಯೋಜಿಸಿ ಸಾವಿರಾರು ಜನರಿಗೆ ಉಚಿತ ಚಿಕಿತ್ಸೆ ಕೊಡಿಸುವ ಮೂಲಕ ಜನಮೆಚ್ಚುವ ಕಾರ್ಯ ಮಾಡಿದ್ದಾರೆ.

ಮದ್ದೂರು ತಾಲ್ಲೂಕಿನ ಸಪ್ತಗಿರಿ ಪಾರ್ಟಿ ಹಾಲ್‌ನಲ್ಲಿ ಇಂದು ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಒಂದೇ ಕಡೆ ಹಲವು ಆರೋಗ್ಯ ಸೇವೆಗಳು ಉಚಿತವಾಗಿ ಜನರಿಗೆ ದೊರಕಿತು. ಹೃದಯ ತಪಾಸಣೆ, ಸ್ತ್ರೀರೋಗ ಮತ್ತು ಪ್ರಸೂತಿ, ಮೂಳೆ ಮತ್ತು ಕೀಲು ರೋಗ ತಪಾಸಣೆ, ಶಿಶುಗಳು ಮತ್ತು ಮಕ್ಕಳ ತಪಾಸಣೆ, ಚರ್ಮ ರೋಗ, ಕ್ಷಯರೋಗ ಪರೀಕ್ಷೆ ಮಾಡಲಾಯಿತು.

ಕಣ್ಣಿನ ತಪಾಸಣೆ, ಕಿವಿ, ಮೂಗು ಮತ್ತು ಗಂಟಲು, ಶಸ್ತ್ರ ಚಿಕಿತ್ಸೆ ತಜ್ಞರು, ಸಾಮಾನ್ಯ ಮಾನಸಿಕ ರೋಗ ತಪಾಸಣೆ, ಎಕೋ ಸ್ಕ್ಯಾನಿಂಗ್, ಇಸಿಜಿ, ರಕ್ತದೊತ್ತಡ, ಮಧುಮೇಹ, ಮೊಳೆ ರೋಗ, ಅಪೆಂಡಿಸೈಟಿಸ್, ಸ್ತನ ಕ್ಯಾನ್ಸರ್, ಆನೆ ಕಾಲು ರೋಗ, ಕರುಳು ಬೇನೆ, ಥೈರಾಯ್ಡ್, ಮೂಗಿನ ಬೆಂಡಾದ ಮೂಳೆ ಸರಿಪಡಿಸುವಿಕೆ, ಪಾರ್ಶ್ವ ವಾಯು, ಮಾನಸಿಕ ರೋಗಗಳ ತಪಾಸಣೆ ನಡೆಯಿತು.

ಬೆಳಗ್ಗೆ 10 ಗಂಟೆಯಿಂದ ಸಂಜೆವರೆಗೂ ನಡೆದ ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸಿ ಚಿಕಿತ್ಸೆ ಪಡೆದರು. ಉಚಿತವಾಗಿ ಔಷಧಗಳನ್ನು ವಿತರಣೆ ಮಾಡಲಾಯಿತು. ಕಣ್ಣಿನ ಪೊರೆ ತಪಾಸಣೆ ನಡೆಸಿ ದೃಷ್ಟಿದೋಷ ಇರುವವರಿಗೆ ಸ್ಥಳದಲ್ಲೇ ಕನ್ನಡ ವಿತರಣೆ ಮಾಡಲಾಯಿತು.

ಆರೋಗ್ಯ ಶಿಬಿರದಲ್ಲಿ ಸಮಾಜ ಸೇವಕ ಕದಲೂರು ಉದಯ್ ಮಾತನಾಡಿ, ಗ್ರಾಮೀಣ ಭಾಗದ ಜನರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯಲು ಅವರ ಬಳಿ ಹಣವೂ ಇರುವುದಿಲ್ಲ. ಇಂತಹ ಬಡಜನರಿಗೆ ನೆರವಾಗುವ ಉದ್ದೇಶದಿಂದ ನನ್ನ ಅಭಿಮಾನಿಗಳು ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದ್ದಾರೆ. ಈ ಶಿಬಿರದಲ್ಲಿ ಭಾಗವಹಿಸಿ ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವುದು ನನಗೆ ಹೆಚ್ಚಿನ ಸಂತೋಷ ನೀಡಿದ್ದು,ಸಾರ್ಥಕತೆಯ ಭಾವ ಮೂಡಿಸಿದೆ ಎಂದರು.

ಮುಂದಿನ ದಿನಗಳಲ್ಲಿ ಬಡ ಜನರಿಗೆ ಅನೂಕುಲ ಕಲ್ಪಿಸಲು ಪ್ರತಿ ಹೋಬಳಿಗಳಲ್ಲೂ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕ ಉಪಯೋಗಿ ಕೆಲಸಗಳಿಗೆ ನನ್ನ ಸಹಕಾರ ಇರಲಿದೆ. ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗುವುದು. ಈಗಾಗಲೇ ಟ್ರಸ್ಟ್ ವತಿಯಿಂದ ಯುವಕರಿಗೆ ಕಬ್ಬಡಿ, ಕ್ರಿಕೆಟ್ ಅಂತಹ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇನೆ ಎಂದರು.

ಪತಿಗೆ ಪತ್ನಿ ಸಾಥ್

ನನ್ನ ಪತಿ ಕದಲೂರು ಉದಯ್ ಅಭಿಮಾನಿಗಳು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿರುವುದು ಸಂತೋಷ ಮತ್ತು ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ನನ್ನ ಪತಿಯ ಸಮಾಜ ಸೇವಾ ಚಟುವಟಿಕೆಗಳಲ್ಲಿ ನಾನೂ‌ ಭಾಗಿಯಾಗಿ ಅವರಿಗೆ ಸಾಥ್ ನೀಡುತ್ತೇನೆ ಎಂದು ಉದಯ್ ಅವರ ಪತ್ನಿ ವಿನುತಾ ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಾಯಿ ಶ್ರೀನಿವಾಸ್, ತಿಮ್ಮೇಗೌಡ , ಮಣಿಗೆರೆ ರಾಮಚಂದ್ರು, ಅಣ್ಣೂರು ಮನೋಹರ್, ಕರಡಕೆರೆ ಮನು, ಅಣ್ಣೂರು ಹರೀಶ್,ನಗರಕೆರೆ ಮಹೇಶ್,ಅಜ್ಜಹಳ್ಳಿ ಮನು, ಪುಟ್ಟರಾಜು, ರೋಟರಿ ಸಂಸ್ಥೆ, ಛಲವಾದಿ ಮಹಿಳಾ ಸಂಘ, ನರೇಗಾ ಕೃಷಿ ಕಾರ್ಮಿಕರ ಸಂಘದ ಸದಸ್ಯರು, ಉದಯ್ ಅಭಿಮಾನಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!