ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದ ರಘು.ಜಿ.ಕೆ (37) ಆತ್ಮಹತ್ಯೆ ಮಾಡಿಕೊಂಡ ರೈತ.
ಟ್ರಾಕ್ಟರ್ ಹಾಗೂ ಬೆಳೆಗಾಗಿ 14 ಲಕ್ಷ ಸಾಲ ಮಾಡಿದ್ದ ರಘು ಸಾಲ ತೀರಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಳೆದ ನಾಲ್ಕು ವರ್ಷದ ಹಿಂದೆ ಟ್ರಾಕ್ಟರ್‌ಗಾಗಿ ಪಿಎಲ್‌ಡಿ ಬ್ಯಾಂಕ್‌ನಲ್ಲಿ 10 ಲಕ್ಷ ಸಾಲ ಪಡೆದಿದ್ದ ರಘು ಕೊರೊನಾ ಇದ್ದರಿಂದ ಇಎಂಐ ಕಟ್ಟಲು ಸಾಧ್ಯವಾಗಿರಲಿಲ್ಲ.
ಅಲ್ಲದೆ ಇತ್ತ ಬೆಳೆಗಾಗಿ ಸಹಕಾರ ಸಂಘದಲ್ಲಿ 2 ಲಕ್ಷ ಸಾಲ ಮತ್ತು ಕೆಲವರಿಂದ 2ಲಕ್ಷ ರೂಗಳಿಗೂ ಹೆಚ್ಚು ಕೈ ಸಾಲ ಮಾಡಿಕೊಂಡಿದ್ದರು.
ಮಳೆಯಿಂದಾಗಿ ತರಕಾರಿ ಬೆಳೆಯೂ ಹಾನಿಗೆ ಒಳಗಾಗಿ ನಷ್ಟ ಸಂಭವಿಸಿತ್ತು. ಸಾಲದ ಹೊರೆ ಹೆಚ್ಚಿದ ಕಾರಣ ಕ್ರಿಮಿನಾಶಕದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಬಂಧ ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.