Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ನೀರು ಬಿಡುಗಡೆ ಶಿಫಾರಸ್ಸಿಗೆ ಖಂಡನೆ : ನಾಳೆ ಹಿತರಕ್ಷಣಾ ಸಮಿತಿ ಸಭೆ

ಕಾವೇರಿ ಅಚ್ಚುಕಟ್ಟು ಪ್ರದೇಶದ ಅಧಿಕಾರಿಗಳನ್ನೊಳಗೊಂಡ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸಭೆ ಪ್ರತಿನಿತ್ಯ ತಮಿಳುನಾಡಿಗೆ 5,000 ಕ್ಯೂಸೆಕ್ಸ್ ನೀರನ್ನು 15 ದಿನಗಳವರೆಗೆ ಬಿಡಬೇಕೆಂದು ಮಾಡಿರುವ ಶಿಫಾರಸ್ಸನ್ನು ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಸಮಿತಿಯ ಈ ನಿರ್ಧಾರ ಕಾವೇರಿ ಕೊಳ್ಳದ ರೈತರ ಪಾಲಿಗೆ ಕರಾಳವಾದ ತೀರ್ಪಾಗಿದೆ. ಕರ್ನಾಟಕ ಸರ್ಕಾರ ಈಗಲಾದರೂ ಅಳಿದುಳಿದ ನೀರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಹಾಗೂ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

ಮುಂದಿನ ಆಗು ಹೋಗುಗಳ ಬಗ್ಗೆ ಚರ್ಚಿಸಲು ಇಂದು ಬೆಳಗ್ಗೆ 9 ಗಂಟೆಗೆ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ರೈತರು, ಪ್ರಗತಿಪರ ಸಂಘಟನೆಗಳು ನಾಗರಿಕ ಬಂಧುಗಳ ತುರ್ತು ಸಭೆ ಕರೆಯಲಾಗಿದ್ದು ಎಲ್ಲರೂ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!