Tuesday, April 30, 2024

ಪ್ರಾಯೋಗಿಕ ಆವೃತ್ತಿ

ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ| ವಿಮಾನ ಹಾರಾಟ ಸ್ಥಗಿತ; ಜನಜೀವನ ಅಸ್ತವ್ಯಸ್ಥ

ಸಾಮಾನ್ಯವಾಗಿ ಅತ್ಯಂತ ಬಿಸಿಲು, ಮೈ ಸುಡುವ ತಾಪಮಾನವನ್ನು ಹೊಂದಿರುವ ದುಬೈನಲ್ಲಿ ಭಾರೀ ಮಳೆ ಸುರಿದು ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.

ಭಾರೀ ಮಳೆಯು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅನ್ನು ಜರ್ಜರಿತಗೊಳಿಸಿತು, ಸಂಪೂರ್ಣ ವಿಮಾನ ಪ್ರಯಾಣ ಅಡ್ಡಿಪಡಿಸಿದೆ, ಅಲ್ಲದೇ ಅಲ್ಲಿರುವ ಮರುಭೂಮಿಯಲ್ಲಿ ವ್ಯಾಪಕ ಪ್ರವಾಹ ಕಾಣಿಸಿಕೊಂಡಿದೆ.

ಅನಿರೀಕ್ಷಿತವಾದ ಈ ಜಲಪ್ರಳಯವು ಇಡೀ ದುಬೈನಗರವನ್ನು ಸ್ತಬ್ಧಗೊಳಿಸಿದ್ದು, ಕಳವಳವನ್ನು ಹುಟ್ಟುಹಾಕಿದೆ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿತ್ತು. ಭಾರೀ ಮಳೆಯಿಂದ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ವಿಶಿಷ್ಟವಾಗಿ ಸಂಜೆಯಂದು 100 ಕ್ಕೂ ಹೆಚ್ಚು ವಿಮಾನಗಳ ಆಗಮನವನ್ನು ಸ್ವಾಗತಿಸುವ ವಿಮಾನ ನಿಲ್ದಾಣವು ತನ್ನ ಕಾರ್ಯವನ್ನು ಸ್ಥಳಿತಗೊಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊಗಳು ಪ್ರವಾಹಕ್ಕೆ ಸಿಲುಕಿದ ರನ್‌ವೇಗಳಲ್ಲಿ ವಿಮಾನಗಳು, ಟ್ಯಾಕ್ಸಿಗಳು ಮತ್ತು ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅರ್ಧ ಮುಳುಗಿದ ಕಾರುಗಳ ದೃಶ್ಯವನ್ನು ಎತ್ತಿ ತೋರಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಪ್ರವೇಶ ರಸ್ತೆಗಳೂ ಜಲಾವೃತಗೊಂಡಿವೆ.

“>

 

ಭಾರತದಿಂದ 15 ವಿಮಾನಗಳು ಸೇರಿದಂತೆ ದುಬೈಗೆ ತೆರಳುವ 79 ವಿಮಾನಗಳನ್ನು ರದ್ದುಗೊಳಿಸಲಾಗಿದೆ, 178 ವಿಮಾನಗಳು ವಿಳಂಬವಾಗಿವೆ ಮತ್ತು 10 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಪ್ರವಾಹವು ಆಗಮನದ ಮೇಲೆ ಮಾತ್ರವಲ್ಲದೆ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳ ಮೇಲೂ ಪರಿಣಾಮ ಬೀರಿದೆ. ದುಬೈನಿಂದ ಭಾರತಕ್ಕೆ ತೆರಳುವ 13 ವಿಮಾನಗಳು ಸೇರಿದಂತೆ ತೊಂಬತ್ತು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು 152 ವಿಮಾನಗಳು ವಿಳಂಬವಾಗಿದೆ.

ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್‌ನಂತಹ ಪ್ರಮುಖ ಶಾಪಿಂಗ್ ಸೆಂಟರ್‌ಗಳು ಸೇರಿದಂತೆ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳು ಜಲಾವೃತಗೊಂಡಿವೆ ಮತ್ತು ದುಬೈನ ಒಂದು ಮೆಟ್ರೋ ನಿಲ್ದಾಣವು ಜಲಾವೃತಗೊಂಡಿದೆ. ರಸ್ತೆಗಳು ಕುಸಿದು ಬಿದ್ದಿವೆ, ವಸತಿ ಸಮುದಾಯಗಳು ಮುಳುಗಿವೆ ಮತ್ತು ವಿವಿಧ ಮನೆಗಳಲ್ಲಿನ ಛಾವಣಿಗಳು, ಬಾಗಿಲುಗಳು ಮತ್ತು ಕಿಟಕಿಗಳು ಮುರಿದು ಬಿದ್ದಿವೆ.

“>

 

ಚಂಡಮಾರುತದ ಪ್ರಭಾವವು ದುಬೈನ ಆಚೆಗೂ ವಿಸ್ತರಿಸಿತು, ಇಡೀ UAE ಮತ್ತು ನೆರೆಯ ಬಹ್ರೇನ್ ನಲ್ಲೂ ಪ್ರವಾಹ ಕಾಣಿಸಿಕೊಂಡಿದೆ. ಸುದ್ದಿ ಸಂಸ್ಥೆ AFP ಪ್ರಕಾರ, ಎಮಿರೇಟ್ಸ್‌ನಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ  ಆಲಿಕಲ್ಲು ಮಳೆ ಜೊತೆ ಉಗ್ರ ಚಂಡಮಾರುತವು ಜನರನ್ನು ಹೈರಾಣಾಗಿಸಿದೆ.

ಆರಂಭದಲ್ಲಿ ಒಮಾನ್‌ಗೆ ಅಪ್ಪಳಿಸಿದ ಚಂಡಮಾರುತವು ಅಪಾಯಕಾರಿಯಾಗಿತ್ತು. ಹಠಾತ್ ಪ್ರವಾಹದಿಂದಾಗಿ ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದರು. ಚಂಡಮಾರುತದಿಂದಾಗಿ ಬಹ್ರೇನ್ ಕೂಡ ಪ್ರವಾಹವನ್ನು ಅನುಭವಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!