Saturday, May 18, 2024

ಪ್ರಾಯೋಗಿಕ ಆವೃತ್ತಿ

ಸೇವೆ – ಸ್ನೇಹ ಸಮ್ಮಿಲನವೇ ಲಯನ್ಸ್ ಮುಖ್ಯ ಧ್ಯೇಯ – ಡಾ.ನಾಗರಾಜ

ನಿತ್ಯ ನಿರಂತರ ಅಗತ್ಯಯುಳ್ಳವರಿಗೆ ಸೇವೆ ಮತ್ತು ಸ್ನೇಹ ಸಮ್ಮಿಲನವೇ ಲಯನ್ಸ್ ಸಂಸ್ಥೆಗಳ ಮುಖ್ಯಧ್ಯೇಯವಾಗಿದೆ ಎಂದು ಅಂತರಾಷ್ಟ್ರೀಯ  ಲಯನ್ಸ್ ಸಂಸ್ಥೆಯ ಜಿಲ್ಲಾ ಮಾಜಿ ರಾಜ್ಯಪಾಲ ಡಾ.ನಾಗರಾಜ ವಿ.ಭೈರಿ ಹೇಳಿದರು.

ಮಂಡ್ಯ ನಗರದ ಹೊರವಲಯದಲ್ಲಿರುವ ಅಗ್ರಿಸಂಸ್ಥೆ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಲಯನ್ಸ್, ಕೃಷಿಕ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಕೆ.ವಿ.ವೀರಪ್ಪ ಕೀಲಾರ ಮತ್ತು ತಂಡದ ನೂತನ ಪದಾಧಿಕಾರಿಗಳ ಪದಗ್ರಹಣ, ನೂತನ ಸದಸ್ಯರಿಗೆ ಪ್ರತಿಜ್ಞಾನಿಧಿ ಬೋಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಾದ್ಯಂತ ಲಯನ್ಸ್ ಸಂಸ್ಥೆಗಳ ಪದಾಧಿಕಾರಿಗಳು ಇದ್ದಾರೆ, ಎಲ್ಲಿಯೇ ಆಗಲಿ ಜನತೆ ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಲಯನ್ಸ್ ಸಂಸ್ಥೆಗಳಿಗೆ ಲಭ್ಯವಾದರೆ, ತಕ್ಷಣವೇ ನೆರವಿಗೆ ಧಾವಿಸುತ್ತಾರೆ, ತಮ್ಮ ಕೈಲಾದ ಸೇವೆ, ಆರೋಗ್ಯ, ಔಷದೋಪಚಾರ ಮಾಡಿ, ಜೀವ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತಾರೆ ಎಂದು ತಿಳಿಸಿದರು.

ಜಾಹೀರಾತು

ನನ್ನ ಅನುಭವದಲ್ಲಿ ನಾವು ಬೆಂಗಳೂರಿಗೆ ಹೋದಾಗ ವೈದ್ಯರೊಬ್ಬನ್ನು ಭೇಟಿ ಮಾಡಿದಾಗ ಲಯನ್ಸ್ ಸಂಸ್ಥೆಯವರು ಎಂದು ಹೇಳಿದಾಗ ಎದ್ದು ನಿಂತು ನಮಸ್ಕಾರ ಮಾಡಿದರು, ಯಾಕೆ ಎಂದು ಕೇಳಿದಾಗ ಹೊರದೇಶದಲ್ಲಿ ಯುದ್ದ ನಡೆದಾಗ ನಮ್ಮನ್ನು ಮಾತನಾಡಿಸಲಿಕ್ಕೆ ಯಾರೂ ಬರಲಿಲ್ಲ, ನಮ್ಮ ಕಷ್ಟಗಳಿಗೆ ಸ್ಪಂದಿಸಿದ್ದು ಲಯನ್ಸ್ ಸಂಸ್ಥೆಯವರು ಎಂದು ಗೌರವದಿಂದ ನುಡಿದರು ಎಂದು ಸ್ಮರಿಸಿಕೊಂಡರು.

ನೂತನ ಅಧ್ಯಕ್ಷ ಕೆ.ಪಿ.ವೀರಪ್ಪ ಕೀಲಾರ ಮಾತನಾಡಿ, ಸುಮಾರು 3 ವರ್ಷಗಳ ಕಾಲ ಲಯನ್ಸ್ ಸಂಸ್ಥೆಗಳ ಒಡನಾಟದಲ್ಲಿದ್ದೇನೆ, ಈ ವರ್ಷ ನಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀರಿ, ಸಮಾಜಕ್ಕಾಗಿ ನಾವೇ ಹೊರತು, ಸಮಾಜ ನಮಗಲ್ಲ, ಇಂದಿನ ಕಾಲಘಟ್ಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇವೆ ಎಂದು ನುಡಿದರು.

ಸರ್ಕಾರ ಏನು ಮಾಡಲಿಕ್ಕೆ ಸಾಧ್ಯವಿಲ್ಲವೋ ಅಂತಹ ಸೇವಾ ಕಾರ್ಯಗಳನ್ನು ಲಯನ್ಸ್ ಸಂಸ್ಥೆಗಳು, ಕೃಷಿಕ ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ ಪದಾಧಿಕಾರಿಗಳು ಮಾಡುತ್ತಿದ್ದಾರೆ, ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿರುವುದು ಅವಿಸ್ಮರಣೀಯ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ವಿವಿಧ ಸೇವಾಕಾರ್ಯಗಳು ನಡೆದವು, ನೂತನ ಸದಸ್ಯರಿಗೆ ಪ್ರತಿಜ್ಞಾನಿಧಿ ಬೋಧನೆ ಕಾರ್ಯ ಸಾಗಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಮಾಜಿ ರಾಜ್ಯಪಾಲ ಮುನಿಯಪ್ಪ, ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ನಿಕಟಪೂರ್ವ ಅಧ್ಯಕ್ಷ ಮೋಹನ್‌ಕುಮಾರ್, ಸಂಸ್ಕೃತಿ ಲಯನ್ಸ್ ಸಂಸ್ಥೆ ಮದ್ದೂರು ಹೆಚ್.ಮಾದೇಗೌಡ, ಸಕ್ಕರೆನಾಡು ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಆರ್.ಶಶಿಧರ್‌ ಈಚಗೆರೆ, ಪ್ರಾಂತೀಯ ಅಧ್ಯಕ್ಷ ಹೆಚ್.ಜಿ.ವಿಠಲ, ವಲಯಾಧ್ಯಕ್ಷ ಅಜಯ್‌ಕೆ.ಕುತ್ನಿಕರ್, ಉಪಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ರಕ್ಷಿತ್‌ರಾಜ್, ಖಜಾಂಚಿ ರಮೇಶ್, ಎಂ.ಟಿ.ಶ್ರೀನಿವಾಸ್, ನೀನಾಪಟೇಲ್, ರತ್ನಮ್ಮ, ಈ.ಸಿ.ಹೊಂಬೇಗೌಡ, ಪ್ರೊ.ಡೇವಿಡ್, ಅಮೂಲ್ಯ, ಮಹಾಲಿಂಗೇಗೌಡ ಮುದ್ದನಘಟ್ಟ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!