ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆ ಮುಂದುವರಿದಿದ್ದು ಕೆ.ಆರ್.ಎಸ್ ನೀರಿನ ಮಟ್ಟ ಮಂಗಳವಾರ ಬೆಳಿಗ್ಗೆ 8 ಗಂಟೆಯ ವೇಳೆಗೆ 96.50 ಅಡಿಗೆ ತಲುಪಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 20.191 ಟಿಎಂಸಿ ನೀರು ಸಂಗ್ರಹವಾಗಿದ್ದು, 8,787 ಕ್ಯೂಸೆಕ್ ಒಳ ಹರಿವು ಹರಿದು ಬರುತ್ತಿದೆ. 526 ಕ್ಯೂಸೆಕ್ ಹೊರ ಹರಿವಿದೆ.
ಕಳೆದ ಎರಡು ದಿನಗಳಿಂದ ಕಾವೇರಿ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕ್ಷೀಣಿಸಿದ್ದು, ಒಳ ಹರಿವಿನ ಪ್ರಮಾಣ ತುಸು ತಗ್ಗಿದೆ. ಈ ವರ್ಷ ಗರಿಷ್ಟ ಒಳ ಹರಿವಿನ ಪ್ರಮಾಣ 18,000 ಕ್ಯೂಸೆಕ್ ನಷ್ಟು ದಾಖಲಾಗಿತ್ತು.