Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಳೆ ಮತದಾನ : ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ, ಇಂದು
ಜಿಲ್ಲಾಧಿಕಾರಿ ಡಾ. ಹೆಚ್.ಎನ್ ಗೋಪಾಲಕೃಷ್ಣ ಅವರು, ಮಂಡ್ಯ ವಿಶ್ವವಿದ್ಯಾನಿಲಯದಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

nudikarnataka.com

ಮಂಡ್ಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಲು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ‌. ಮತದಾರರ ಮನಗೆಲ್ಲಲು ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಪಿಂಕ್ ಮತಗಟ್ಟೆ ಸ್ಥಾಪಿಸಲಾಗಿದೆ‌.ಮಹಿಳಾ ಮತದಾರರ ಸೆಳೆಯಲು ಪಿಂಕ್ ಮತಗಟ್ಟೆ ಸ್ಥಾಪಿಸಲಾಗಿದೆ .ಮತದಾನ ಕೇಂದ್ರಗಳಿಗೆ ಪಿಂಕ್ ಬಣ್ಣ ಬಳಿದು ಸುಂದರವಾಗಿಸಲಾಗಿದೆ. ಹಾಗೆಯೇ ಕೆಲವು ಮತಗಟ್ಟೆಗಳಲ್ಲಿ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಬರೆದು ಸಾಂಸ್ಕೃತಿಕ ವಾತಾವರಣ ಮೂಡಿಸಲಾಗಿದೆ‌.ಹಾಗೆಯೇ ಯಂಗ್ ಎಂಪ್ಲಾಯಿ ಎಂಬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

nudikarnataka.com

ಒಟ್ಟು 1798 ಮತಗಟ್ಟೆಗಳು
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1798 ಮತಗಟ್ಟೆಗಳಿವೆ.ಅದರಲ್ಲಿ 24 ಅತಿ ಸೂಕ್ಷ್ಮ ಹಾಗೂ 319 ಸೂಕ್ಷ್ಮ ಮತಗಟ್ಟೆಗಳಿದ್ದು,1419 ಸಾಮಾನ್ಯ ಮತಗಟ್ಟೆಗಳಿವೆ.

  • ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 254 ಮತಗಟ್ಟೆಗಳಿದ್ದು, 5 ಅತಿ ಸೂಕ್ಷ್ಮ, 50 ಸೂಕ್ಷ್ಮ ಹಾಗೂ 204 ಸಾಮಾನ್ಯ ಮತಗಟ್ಟೆಯಿದೆ.
  • ಮಳವಳ್ಳಿಯಲ್ಲಿ 268 ಮತಗಟ್ಟೆ ಇದ್ದು, 3 ಅತಿ ಸೂಕ್ಷ್ಮ, 56 ಸೂಕ್ಷ್ಮ ಹಾಗೂ 210 ಸಾಮಾನ್ಯ ಮತಗಟ್ಟೆಗಳಿವೆ.
  • ಮದ್ದೂರಿನಲ್ಲಿ 254 ಮತಗಟ್ಟೆಗಳಿದ್ದು, 4 ಅತಿ ಸೂಕ್ಷ್ಮ, 40 ಸೂಕ್ಷ್ಮ ಸೇರಿ 210 ಸಾಮಾನ್ಯ ಮತಗಟ್ಟೆಯಿದೆ.
  • ಮೇಲುಕೋಟೆ ಕ್ಷೇತ್ರದಲ್ಲಿ 254 ಮತಗಟ್ಟೆಗಳಲ್ಲಿ 3 ಅತಿ ಸೂಕ್ಷ್ಮ, 51 ಸೂಕ್ಷ ಹಾಗೂ 206 ಸಾಮಾನ್ಯ ಮತಗಟ್ಟೆಯಿದೆ.
  • ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 249 ಮತಗಟ್ಟೆಗಳಿದ್ದು,3 ಅತಿ ಸೂಕ್ಷ್ಮ, 25 ಸೂಕ್ಷ್ಮ ಹಾಗೂ 221 ಸಾಮಾನ್ಯ ಮತಗಟ್ಟೆಗಳಿವೆ.
  • ನಾಗಮಂಗಲ ಕ್ಷೇತ್ರದಲ್ಲಿ 257 ಮತಗಟ್ಟೆಗಳಲ್ಲಿ,3 ಅತಿ ಸೂಕ್ಷ್ಮ,52 ಸೂಕ್ಷ್ಮ ಹಾಗೂ ಸೇರಿ 204 ಸಾಮಾನ್ಯ ಮತಗಟ್ಟೆ ಇದೆ.
  • ಕೆ.ಆರ್.ಪೇಟೆಯಲ್ಲಿ 258 ಮತಗಟ್ಟೆಗಳಿದ್ದು,3 ಅತಿ ಸೂಕ್ಷ್ಮ,45 ಸೂಕ್ಷ್ಮ ಸೇರಿ 213 ಸಾಮಾನ್ಯ ಮತಗಟ್ಟೆಗಳಿವೆ.

nudikarnataka.com

ಚುನಾವಣಾ ಸಿಬ್ಬಂದಿಗಳನ್ನು ಮಸ್ಟರಿಂಗ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಸರ್ಕಾರಿ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಚುನಾವಣಾ ಸಿಬ್ಬಂದಿಗಳು ತಮಗೆ ವಹಿಸಲಾಗಿರುವ ಬೂತ್ ಗಳಿಗೆ ಚುನಾವಣಾ ಪರಿಕರಗಳಾದ ಇವಿಎಂ ಯಂತ್ರ,ವಿವಿ ಪ್ಯಾಟ್‌ ಸೇರಿದಂತೆ ಇತರ ಪರಿಕರಗಳನ್ನು ಕೊಂಡೊಯ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!