Thursday, September 19, 2024

ಪ್ರಾಯೋಗಿಕ ಆವೃತ್ತಿ

ಆಕಸ್ಮಿಕ ಅವಘಡ ಸಂಭವಿಸಿದಾಗ ಪ್ರಥಮ ಚಿಕಿತ್ಸೆ ಅತ್ಯವಶ್ಯಕ : ಡಾ.ಹೆಚ್.ಎಲ್ ನಾಗರಾಜು

ಆಕಸ್ಮಿಕವಾಗಿ ಅವಘಡಗಳು ಸಂಭವಿಸಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಹಾಗೂ ರಕ್ಷಣಾ ತಂಡ ಆಗಮಿಸುವು ದಕ್ಕೂ ಮೊದಲು ಗಾಯಾಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುವುದು ಅತ್ಯವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ರಾಷ್ತ್ರೀಯ ವಿಪತ್ತು ಪ್ರತಿಕ್ರಿಯ ಪಡೆ, ನೆಹರು ಯುವ ಕೇಂದ್ರ, ಎನ್.ಸಿ.ಸಿ ಘಟಕ, ಪಿ.ಇಎಸ್ ಕಲಾ ವಾಣಿಜ್ಯ ವಿಜ್ಞಾನ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಮಹಿಳಾ ಸರ್ಕಾರಿ ಕಾಲೇಜು ಇವರ ಸಹಯೋಗದಲ್ಲಿ ಮಂಡ್ಯನಗರದ ನೆಹರು ಯುವ ಕೇಂದ್ರದ ಸಭಾಂಗಣ ದಲ್ಲಿಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ವಿಕೋಪಗಳು ಸಂಭವಿಸುವ ಸಾಧ್ಯತೆ ಇದೆ. ಪ್ರಾಕೃತಿಕ ಅಥವಾ ಮಾನವ ನಿರ್ಮಿತ ವಿಕೋಪಗಳು ಆದಾಗ ಅವುಗಳನ್ನ ನಿರ್ವಹಣೆ ಮಾಡಲು ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದರು.

ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಾಗ, ನಾಲೆಗಳಲ್ಲಿ ಯಾರಾದರೂ ಮುಳಿಗಿದಾಗ, ಬಸ್ ಅಪಘಾತ ಸಂಭವಿಸಿದಾಗ, ಅಪಘಾತಕ್ಕೆ ಒಳಗಾದ ವ್ಯಕ್ತಿಗಳನ್ನು, ಯಾವುದೇ ತಪ್ಪುಗಳನ್ನು ಮಾಡಾದೇ ಜೀವ ಉಳಿಸಲು ಎಚ್ಚರ ವಹಿಸಬೇಕಾದ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಎನ್ ಡಿ ಆರ್ ಎಫ್ ತಂಡದವರು ವಿಪತ್ತು, ಅವಘಡ, ಅಪಘಾತ ಸಂಭವಿಸಿದಾಗ ನಾವು ಎನು ಮಾಡಬೇಕೆಂದು ಪ್ರಾತ್ಯಕ್ಷಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಎನ್ ಡಿ ಆರ್ ಎಫ್ ಇನ್ಸ್ಪೆಕ್ಟರ್ ಶಿವಕುಮಾರ್, ಆಕಾಶ್, ಎಂ.ಎಸ್ ಮಠಪತಿ, ಸಂದೀಪ್ ಸಿಂಗ್, ಮಹಿಳಾ ಕಾಲೇಜಿನ ಉಪನ್ಯಾಸಕಿ ಕೆಂಪಮ್ಮ, ಕೆ ಪಿ ಅರುಣ ಕುಮಾರಿ, ವಿಪತ್ತು ನಿರ್ವಹಣಾ ಪರಿಣಿತರಾದ ಪುನೀತ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!