Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಕವಿಗೋಷ್ಠಿ- ಜಾನಪದ ಗೀತ ಗಾಯನ

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಮಳವಳ್ಳಿ ತಾಲ್ಲೂಕು ಘಟಕದ ವತಿಯಿಂದ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿ ಹಾಗೂ ಜಾನಪದ ಗೀತ ಗಾಯನ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಮಾಜಿ ಸಚಿವ ಸೋಮಶೇಖರ್ ಕಚೇರಿಯ ಆವರಣದಲ್ಲಿ ನಡೆಯಿತು.

ಮಿಲಿಂದ ಬುದ್ದ ವಿಹಾರದ ಸಂಸ್ಥಾಪಕ ದರ್ಶನ್ ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆಯೂ ಪ್ರಾಚೀನ ಕಾಲದಿಂದಲೂ ಬರವಣಿಗೆ ರೂಪದಲ್ಲಿಲ್ಲದೇ ಬಾಯಿಂದ ಬಾಯಿಗೆ ಬಂದಿದೆ. ಸಂಗೀತ, ಕಲೆ, ನೃತ್ಯ ಸೇರಿದಂತೆ ಸಾಂಸ್ಕೃತಿಕ ವಿಜ್ಞಾನಗಳೆಲ್ಲಾವು ಸಾಹಿತ್ಯದಲ್ಲಿ ಸೇರಿವೆ. ಮನಷ್ಯರು ಭೂಮಿ ಮೇಲೆ ಹೆಜ್ಜೆ ಇಟ್ಟಿನಿಂದಲೂ ಭಾಷೆ ಜೊತೆಯಲ್ಲಿ ಸಾಹಿತ್ಯ ಬಂದಿದೆ, ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ, ಗ್ರಾಮೀಣ ಪ್ರದೇಶದಲ್ಲಿರುವ ಕವಿಗಳು ಇಂತಹ ದಸರಾ ಕವಿಗೋಷ್ಠಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಕಾವ್ಯವಾಚನ ಮಾಡಿದರು.

ವೇದಿಕೆಯಲ್ಲಿ ಸಾಹಿತಿ ಡಾ.ಜೆ ರಾಜು ಗುಂಡಾಪುರ, ತಾ.ಪಂ. ಮಾಜಿ ಉಪಾಧ್ಯಕ್ಷ ಸಿ.ಮಾಧು, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜಯರಾಜು, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಚೇತನ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಪುರಸಭೆ ಸದಸ್ಯ ಸಿದ್ದರಾಜು ರಾಜಶೇಖರ್, ಮಹದೇವಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ರವಿಚಂದ್ರ, ಗುರುಸ್ವಾಮಿ, ಚನ್ನಸವಯ್ಯ, ಬಸವರಾಜು ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!