Thursday, September 19, 2024

ಪ್ರಾಯೋಗಿಕ ಆವೃತ್ತಿ

ಲಯನ್ಸ್ ವತಿಯಿಂದ ಹೊಲಿಗೆ- ಎಂಬ್ರಾಯ್ಡರಿ ಯಂತ್ರ ವಿತರಣೆ

ಮಹಿಳೆಯರ ಸ್ವಾವಲಂಬನೆಗಾಗಿ ಹೊಲಿಗೆ ಯಂತ್ರ ಹಾಗೂ ಎಂಬ್ರಾಯ್ಡರಿ ಮಷೀನ್ ಹಾಗೂ ಇನ್ನಿತರ ಪರಿಕರಗಳನ್ನು ವಿತರಿಸುವುದು ಲಯನ್ಸ್ ಸೇವೆಗಳಲ್ಲಿ ಒಂದಾಗಿದೆ ಎಂದು ಮಧುರ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ತ್ಯಾಗರಾಜು ತಿಳಿಸಿದರು

“ಅಂತರ ರಾಷ್ಟ್ರೀಯ ಲಯನ್ ಸೇವಾ ಸಪ್ತಾಹ”ದ ಅಂಗವಾಗಿ ಲಯನ್ ಜಿಲ್ಲೆ 317-ಜಿ ವ್ಯಾಪ್ತಿಯಲ್ಲಿರುವ ಮಂಡ್ಯದ ಲಯನ್ಸ್ ಕ್ಲಬ್ ಗಳಾದ ಮಧುರ-ಇಂಜಿನಿಯರ್ಸ್-ನಾಲ್ವಡಿ -ಅಕ್ಷಯ -ಮಂಡ್ಯ -ಹಾಗೂ ಬಸರಾಳು ಲಯನ್ಸ್ ಕ್ಲಬ್ಗಳ ಸಹಯೋಗದಲ್ಲಿ, ಮಹಿಳಾ ಸಬಲೀಕರಣದ ಪ್ರಯುಕ್ತ ಪರಿಮಳ ಹಾಗೂ ಭಾಗ್ಯಮ್ಮ ಅವರಿಗೆ ಹೊಲಿಗೆ ಯಂತ್ರ ಹಾಗೂ ಎಂಬ್ರಾಯಿಡರಿ ಮಷೀನ್ ಅನ್ನು ಎಲ್ಲರೂಡಗೂಡಿ ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಂಬಾಸಡರ್ ಲಯನ್ ಆನಂದ್, ಜಿ.ಎಮ್. ಟಿ ಕೋ -ಆರ್ಡಿನೇಟರ್ ಲಯನ್. ಟಿ.ನಾರಾಯಣಸ್ವಾಮಿ, ಜಿ.ಈ. ಟಿ.ಕೋ- ಆರ್ಡಿನೇಟರ್ ಲಯನ್ ಹನುಮಂತಯ್ಯ, ವಲಯಾಧ್ಯಕ್ಷ ಲಯನ್. ಜಿ. ಧನಂಜಯ ದರಸಗುಪ್ಪೆ, ಲಯನ್ಸ್ ಡಿ.ಸಿ.ಗಳಾದ ಲ.ಶಿವಲಿಂಗಯ್ಯ ಲ.ಇಂಜಿನಿಯರ್ ನಾಗರಾಜು, ಲಯನ್. ಇಂಜಿನಿಯರ್ ಕೆಂಪರಾಜು, ಲಯನ್ ಎಂ. ಈ ಸುಭಾಷ್, ಲಯನ್ಸ್ ಕ್ಲಬ್ ಗಳಾದ, ಮಧುರ -ಮಂಡ್ಯ -ನಾಲ್ವಡಿ – ಇಂಜಿನಿಯರ್ಸ್, ಅಕ್ಷಯ ಹಾಗೂ ಬಸರಾಳು ಕ್ಲಬ್ ಪದಾಧಿಕಾರಿಗಳಾದ ಲ. ಪುಟ್ಟಸ್ವಾಮಿ, ಲ. ಚಂದ್ರಶೇಖರ, ಲ. ದೇವೇಗೌಡ,ಲ. ತಮ್ಮಣ್ಣ ಗೌಡ,ಶಿವಲಿಂಗೇಗೌಡ, ಲ. ಪ್ರದೀಪ್, ಲ. ಆನಂದ್ ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!