ಭಕ್ತಸಾಗರದ ಹರ್ಷೋದ್ಘಾರದ ನಡುವೆ ಶ್ರೀ ಲಕ್ಷ್ಮಿ ಜನಾರ್ಧನ ಸ್ವಾಮಿ ರಥೋತ್ಸವ ಸಂಭ್ರಮದಿಂದ ನಡೆಯಿತು.
ಮಂಡ್ಯ ನಗರದ ಹಳೇ ನಗರದಲ್ಲಿರುವ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನಡೆದವು. ಬಗೆ ಬಗೆಯ ಹೂವುಗಳಿಂದ ದೇವರನ್ನು ಅಲಂಕರಿಸಲಾಗಿತ್ತು.
ಲಕ್ಷ್ಮಿ ಜನಾರ್ಧನ ಸ್ವಾಮಿಗೆ ಆರತಿ ಬೆಳಗಲಾಯಿತು. ರಥೋತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ಪೇಟೆಬೀದಿಯ ಪ್ರಮುಖ ರಸ್ತೆಗಳಲ್ಲಿ ರಥೋತ್ಸವ ಸಾಗಿತು.ರಸ್ತೆಯ ಎರಡೂ ಬದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ತಳಿರು ತೋರಣಗಳಿಂದ ಬೀದಿಯನ್ನು ಸಿಂಗರಿಸಲಾಗಿತ್ತು. ರಥೋತ್ಸವ ಸಾಗಿದ ಬೀದಿಗಳಲ್ಲಿ ರಸ್ತೆಗೆ ನೀರು ಹಾಕಿ ರಂಗೋಲಿ ಹಾಕಿದ್ದರು.
https://youtube.com/shorts/9ksmuU603Mc
ಭಕ್ತರು ಗೋವಿಂದ ಗೋವಿಂದ ಎಂದು ಹರ್ಷೋದ್ಘಾರ ಮಾಡುತ್ತಾ ರಥವನ್ನು ಎಳೆದರು. ಹೆಂಗಸರು,ಮಕ್ಕಳು, ಯುವಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಭಕ್ತರು ಲಕ್ಷ್ಮೀಜನಾರ್ಧನ ಸ್ವಾಮಿ ರಥೋತ್ಸವಕ್ಕೆ ಬಾಳೆಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು. ಭಕ್ತಾದಿಗಳು ರಥೋತ್ಸವಕ್ಕೆ ಬಂದ ಜನರಿಗೆ ಮಜ್ಜಿಗೆ, ಪಾನಕ ಮತ್ತು ಪ್ರಸಾದ ನೀಡಿದರು.