Friday, March 29, 2024

ಪ್ರಾಯೋಗಿಕ ಆವೃತ್ತಿ

ದುಬಾರಿ ಬಂಡೂರು ತಳಿ ಟಗರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ ಮರೀಗೌಡ

ಹಲಗೂರು ಸಮೀಪದ ಹುಚ್ಚೇಗೌಡನ ದೊಡ್ಡಿ ಗ್ರಾಮದ ಮರಿಗೌಡ ಎಂಬುವರು ಸುಮಾರು ರೂ.1,10,000 ಬೆಳೆ ಬಾಳುವ ಟಗರನ್ನು ಗ್ರಾಮಕ್ಕೆ ತೆಗೆದುಕೊಂಡು ಬಂದಾಗ ಅಲ್ಲಿಯ ಗ್ರಾಮಸ್ಥರು ಈ ಅತಿ ಹೆಚ್ಚು ಬೆಳೆ ಬಾಳುವ ಟಗರನ್ನು ತಂದಿರುವುದನ್ನು ನೋಡುವುದಕ್ಕಾಗಿ ಜಮಾವಣೆಗೊಂಡು ನಂತರ ಹುಸ್ಕೂರು ಗ್ರಾಮದಲ್ಲಿ ಮೆರವಣಿಗೆ ಮುಖಾಂತರ ಹುಚ್ಚೇಗೌಡನ ದೊಡ್ಡಿ ಗ್ರಾಮಕ್ಕೆ ಕರೆದೊಯ್ಯಲಾಯಿತು.

ಅಲ್ಲಿಯ ಗ್ರಾಮಸ್ಥರು ಈ ದುಬಾರಿ ಟಗರನ್ನು ನೋಡುವುದಕ್ಕಾಗಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ಸಂತಸ ವ್ಯಕ್ತಪಡಿಸಿದ ಅಪರೂಪದ ಘಟನೆ ಭಾನುವಾರ ಜರುಗಿದೆ.

ಮೂಲತಃ ಹುಚ್ಚೇಗೌಡನ ದೊಡ್ಡಿ ಗ್ರಾಮದ ನಿವಾಸಿ ಶಿವಪುಟ್ಟೇಗೌಡನ ಮಗ ಮರೀಗೌಡ ಜೀವನದಲ್ಲಿ ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುವುದರ ಜೊತೆಗೆ ಟಗರು ತಂದು ಕಸಿ ಮಾಡುವ ಉದ್ದೇಶದಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಭಾನುವಾರ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮಕ್ಕೆ ತೆರಳಿ ಅಲ್ಲಿ ಬಂಡೂರು ತಳಿ ಟಗರನ್ನು ಒಂದು ಲಕ್ಷದ ಹತ್ತು ಸಾವಿರ ರೂಗಳನ್ನು ನೀಡಿ ಟಗರನ್ನು ತೆಗೆದುಕೊಂಡು ಬಂದ ಸ್ವಗ್ರಾಮಕ್ಕೆ ಹೋಗುವುದಕ್ಕಾಗಿ ಹುಸ್ಕೂರು ಗ್ರಾಮಕ್ಕೆ ಬಂದಾಗ ಸ್ಥಳೀಯ ಗ್ರಾಮಸ್ಥರ ಮತ್ತು ಸ್ವಗ್ರಾಮದವರು ಜೊತೆ ಸೇರಿ ಮೆರವಣಿಗೆ ಮಾಡಿಕೊಂಡು ಸ್ವಗ್ರಾಮಕ್ಕೆ ತೆರಳಿದರು. ಈ ಟಗರಿನ ಮೆರವಣಿಗೆ ದೃಶ್ಯವನ್ನು ನೋಡುವುದಕ್ಕಾಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಜಮಾವಣೆಗೊಂಡಿದ್ದರು.

ನಂತರ ಮರಿಗೌಡ ಮಾತನಾಡಿ ನಾನು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದು ಮತ್ತು ಅದರ ಜೊತೆಯಲ್ಲಿ 50 ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಹದಿನೆಂಟು ತಿಂಗಳು ತುಂಬಿರುವ ಟಗರನ್ನು ತಂದು ಬಿತ್ತನೆ ಮಾಡುವುದಕ್ಕಾಗಿ ತಂದಿರುತ್ತೇನೆ ಎಂದರು.

ಸ್ಥಳೀಯ ನಿವಾಸಿ ಕುಮಾರ್ ಎಂಬುವರು ಮಾತನಾಡಿ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತನೆ ಮಾಡುವ ಟಗರು ಇರಲಿಲ್ಲ ಇವರು ತಂದಿರುವುದು ಸ್ಥಳೀಯ ಜನತೆಗೆ ಹಾಗೂ ಸುತ್ತಮುತ್ತಲಿನ ಜನತೆಗೆ ಅನುಕೂಲವಾಗುತ್ತದೆ. ಇವರು ವೃತ್ತಿಯಲ್ಲಿ ಕುರಿ ಮೇಯಿಸಿಕೊಂಡು ಹಾಗೂ ಬಿತ್ತನೆ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆಂದು ಅವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಟಿ.ರವಿ, ಬೆಟ್ಟೇಗೌಡ, ಕೆಂಪೇಗೌಡ ಉರ್ಪ್ ಪಾಪಣ್ಣ, ಮಂಜು, ಕುಮಾರ್, ನಾಗರಾಜು, ಕೆಂಪೇಗೌಡ, ಇದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!