Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಜಮೀನು ವ್ಯಾಜ್ಯ: ಮೂವರು ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ

ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿ ವ್ಯಾಜ್ಯದಲ್ಲಿ ಗುಂಪೊಂದು ಮೂವರು ಮಹಿಳೆಯರ ಮೇಲೆ ಏಕಾಏಕಿ  ಮಾರಣಾಂತಿಕ ಹಲ್ಲೆ ನಡೆಸಿ, ಮಹಿಳೆಯರ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಓಲೆಯನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿ ಬ್ಯಾಲದಕೆರೆ ದಾಖಲೆ ಗ್ರಾಮ ಹೊಸೂರಿನಲ್ಲಿ ನಡೆದಿದೆ.

ಘಟನೆಯಲ್ಲಿ ನಾಗಮ್ಮ, ಮಾಲಮ್ಮ, ಮಂಜಮ್ಮ ಎಂಬ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಬ್ಯಾಲದಕೆರೆ ದಾಖಲೆ ಗ್ರಾಮ ಹೊಸೂರು ಸರ್ವೆ ನಂಬರ್ 97ರ ಸರ್ಕಾರಿ ಗೋಮಾಳ ತೋಟದ ಮನೆಯಲ್ಲಿ ತಿಮ್ಮಮ್ಮ w/o ಲೇಟ್ ಸುಬ್ಬೇಗೌಡ ಅವರ ಜಮೀನಿಗೆ ರಸ್ತೆ ಇಲ್ಲದೇ ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೇ ವಿಚಾರವಾಗಿ ದಿನಾಂಕ ಕೈದಾಳೇಗೌಡ ಕುಟುಂಬದವರು ದೂರುದಾರ ಕುಟುಂಬದ ಸದಸ್ಯರ ನಡುವೆ ಜಗಳ ನಡೆದು, ಮೂವರು ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಕೆ.ಆರ್.ಪೇಟೆ ಪಟ್ಟಣದ ಪೋಲಿಸ್ ಠಾಣೆಗೆ ಮಂಜೇಗೌಡ ಬಿನ್ ಜವರೇಗೌಡ ಅವರು ನೀಡಿದ ದೂರಿನ ಆಧಾರದ ಮೇಲೆ ಪೋಲಿಸರು ಪ್ರಕರಣವನ್ನು ದಾಖಲಾಗಿಸಿದ್ದಾರೆ.

ಸ್ಥಳಕ್ಕೆ ಪೋಲಿಸ್ ಇನ್ಸ್‌ಪೆಕ್ಟರ್ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಇಬ್ಬರಿಗೂ ತಿಳುವಳಿಕೆ ನೀಡಿ ಈಗಿನ ಯಥಾಸ್ಥಿತಿ ಏನಿದೆ ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಬುದ್ದಿ ಹೇಳಿ ಬಂದಿದ್ದರು. ಆದರೆ ನಿನ್ನೆ(ನ.20) ಸೋಮವಾರ ಬೆಳಗಿನ ಜಾವ ಗಂಡಸರು ಮನೆಯಿಂದ ಹೊರಗಡೆ ಹೋದಾಗ ನನ್ನ ತಾಯಿ ನಾಗಮ್ಮ, ನನ್ನ ಚಿಕ್ಕಮ್ಮರಾದ ಮಾಲಮ್ಮ, ಮಂಜಮ್ಮ ಅವರ ಮೇಲೆ ಹರೀಶ್, ಚಂದ್ರೇಗೌಡ, ಮಂಜೇಗೌಡ, ಮಮತಾ, ಶೈಲಜಾ, ಯಶವಂತ್, ಮಮತಾ ಸೇರಿದಂತೆ ಗುಂಪೊಂದು ಕೊಲೆಯತ್ನ ಮಾಡಿ ಮಚ್ಚು, ದೊಣ್ಣೆ, ಕಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅಕ್ಕಪಕ್ಕದ ಜನರು ಬರುವಷ್ಟರಲ್ಲಿ  ಪರಾರಿಯಾದರೆಂದು ದೂರಿನಲ್ಲಿ ತಿಳಿಸಲಾಗಿದೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ, ಪೋಲಿಸರು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಆರಂಭಿಸಿದ್ದಾರೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!