Wednesday, September 25, 2024

ಪ್ರಾಯೋಗಿಕ ಆವೃತ್ತಿ

ಜಾನಪದ ಸಾಹಿತ್ಯ ಎಂದೆಂದಿಗೂ ಬತ್ತಬಾರದು: ನಿರ್ಮಲಾನಂದನಾಥಶ್ರೀ

ಜಾನಪದ ಸಾಹಿತ್ಯ ಅಮೂಲ್ಯವಾದುದು. ಶಿಷ್ಟ ಸಾಹಿತ್ಯವನ್ನು ಮೀರಿಸುವ ಜಾನಪದ ಸಾಹಿತ್ಯ ಎಂದೆಂದಿಗೂ ಬತ್ತಬಾರದು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥಸ್ವಾಮಿ ಹೇಳಿದರು.

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭಿಷೇಕ, ಶ್ರೀಗುರು ಸಂಸ್ಮರಣೋತ್ಸವ ಮತ್ತು ರಾಜ್ಯ ಮಟ್ಟದ 45ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರು ಜಾನಪದ ಸಾಹಿತ್ಯ ಸಂರಕ್ಷಿಸುವ ಕೆಲಸವನ್ನು ಗಣಕಯಂತ್ರ ಕಣ್ಣು ಬಿಡುವ ಕಾಲದಲ್ಲಿ ಮಾಡಿದ್ದಾರೆ. ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ಕೆಲಸ ಮಾಡಿದ್ದಾರೆ. ಈ ನೆಲದ ತಾಯಂದಿರು ಜಾನಪದ ಸಾಹಿತ್ಯದ ಬೇರು ಎಂದ ಅವರು, ಜಾನಪದ ಕಲಾಮೇಳವನ್ನು ನಾಡಿನ ಹಲವು ಭಾಗಗಳಿಂದ ಕಲಾವಿದರು ಬಂದು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದೀರಿ.ನಮ್ಮ ಮಠ ಎಂದೆಂದಿಗೂ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಲಿದೆ ಎಂದರು.

ಬಾಲಗಂಗಾಧರನಾಥ ಸ್ವಾಮೀಜಿ ಅವರು ಆದಿಚುಂಚನಗಿರಿ ಮಠದ 71 ನೇ ಪೀಠಾಧಿಪತಿಗಳಾಗಿ
ಹಲವಾರು ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವರದು ಪೂಜ್ಯನೀಯ ಕೆಲಸ ಎಂದರು.

ನಮ್ಮ ದೇಶ ರೈತರ ದೇಶ.ಶೇ.70 ರಷ್ಟು ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರು ರೈತರ ಬದುಕು ಹಸನಾಗಲು ಹೆಚ್ಚು ಕೆಲಸ ಮಾಡಲಿ. ಮಾಯಸಂದ್ರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆಗೆ ಚಲುವರಾಯಸ್ವಾಮಿ ಸಹಕಾರ ನೀಡಿದ್ದಾರೆ. ಈ ವರ್ಷದಿಂದ ಕೃಷಿ ವಿಜ್ಞಾನ ಕಾಲೇಜು ಆರಂಭವಾಗಿದ್ದು,ಇದಕ್ಕೆ ಕಾರಣರಾದ ಚಲುವರಾಯಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!