Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಸವಣ್ಣನವರ ತತ್ವ ಅನುಸರಿಸಿ : ಕೆ.ಟಿ ಶ್ರೀಕಂಠೇಗೌಡ

ಹನ್ನೆರಡನೇ ಶತಮಾನದಲ್ಲಿ ತಮ್ಮ ಸಾಮಾಜಿಕ ಕ್ರಾಂತಿಯಿಂದ‌ ಬದಲಾವಣೆಯನ್ನು ತಂದ ಬಸವಣ್ಣನವರ ಜೀವನ ಎಲ್ಲರಿಗೂ ದಾರಿದೀಪ. ಅವರ ತತ್ವ, ಆದರ್ಶಗಳನ್ನು ಅನುಸರಿಸಿ ಉತ್ತಮ ಮಾರ್ಗದಲ್ಲಿ ನಡೆಯೋಣ ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ,ಮಂಡ್ಯ ಜಿಲ್ಲಾ ಬಸವ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಜಾತಿಯ ತಾರತಮ್ಯ ಮಂದುವರೆದಿದೆ. ಸಮಾಜದ ಹೊಸ ಬದಲಾವಣೆ ತರುವಲ್ಲಿ ಬಸವಣ್ಣ ರವರ ಪಾತ್ರ ಅಪಾರವಾಗಿದ್ದು, ಅವರ ಆದರ್ಶಗಳಂತೆ ನಡೆದುಕೊಂಡು ಉತ್ತಮ ಸಮಾಜ ನಿರ್ಮಿಸೋಣ ಎಂದರು.

ಜಿಲ್ಲಾಧಿಕಾರಿ ಎಸ್.ಅಶ್ವತಿ ರವರು ಮಾತನಾಡಿ, ಸಮಾಜದಲ್ಲಿ ಸಮಾನತೆಯನ್ನು ಸೃಷ್ಟಿಸಲು ಹೋರಾಡಿದ ಹಾಗೂ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸಿದ ನಾಯಕ ಬಸವಣ್ಣನವರು ಎಂದರು.

ಲಿಂಗ, ವರ್ಗ ಸಮುದಾಯಗಳನ್ನು ದಾಟಿ ಹೊರಗೆ ಬಂದು ಎಲ್ಲರೂ ಸಮಾಜದಲ್ಲಿ ಸಮಾನತೆಯಿಂದ ಬದುಕೋಣ ಹಾಗೂ ಸಮಾಜದ ಸುಧಾರಣೆ ಕೆಲಸವನ್ನು ಮಾಡೋಣ ಎಂದು ತಮ್ಮ ವಚನಗಳ ಮೂಲಕ ಕ್ರಾಂತಿ ಮಾಡಿದವರು ಬಸವಣ್ಣ ನವರು ಎಂದು ಹೇಳಿದರು.

ಬಸವಣ್ಣನವರು ಮೇಲು ಕೀಳು ಎಂಬ ತಾರತಮ್ಯವನ್ನು ಕಿತ್ತೊಗೆದು ಎಲ್ಲರೂ ಸಮಾನರು ಎಂದು ಭಾವಿಸಿ ಆರ್ಥಿಕ, ಸಾಮಾಜಿಕ ವಿಷಯಗಳನ್ನು ಕುರಿತು ತಮ್ಮ ಅನುಭವ ಮಂಟಪದಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸುತ್ತಿದ್ದರು ಎಂದರು.

12ನೇ ಶತಮಾನದಲ್ಲಿಯೇ ಬಸವಣ್ಣ ನವರಿಗೆ ಸಮಾಜದ ಅಭಿವೃದ್ಧಿ ಯ ಬಗ್ಗೆ ಬಹಳ ಕಾಳಜಿ ಇತ್ತು. ಆಗಾಗಿ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತು ನಮ್ಮ ಕೆಲಸವನ್ನು ಎಷ್ಟು ಶ್ರದ್ಧೆಯಿಂದ ನಿರ್ವಹಿಸಬೇಕು ಎಂಬುದರ ಅರ್ಥವನ್ನು ತಿಳಿಸುತ್ತದೆ ಎಂದರು.

ಬಸವ ಜಯಂತಿ ಆಚರಣೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಜೊತೆಗೆ ಕೈ ಜೋಡಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಂಘಟನೆಗಳಿಗೆ ಅಭಿನಂದನೆ ಎಂದು ಹೇಳಿದರು.

ಪ್ರಾಧ್ಯಾಪಕರು ಹಾಗೂ ಸಂಸ್ಕೃತಿ ಚಿಂತಕರಾ ಡಾ. ಜ್ಯೋತಿ ಶಂಕರ್ ರವರು ಮಾತನಾಡಿ ಬಸವಣ್ಣನ ಜಯಂತಿ ಕಾರ್ಯಕ್ರಮ ಮನೆ ಮನೆಗಳಲ್ಲಿ ಆಚರಿಸಬೇಕು. ಬಸವಣ್ಣ ಅವರ ವಚನಗಳ ಅರ್ಥ ತಿಳಿದು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಐಶ್ವರ್ಯ, ಅಪರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಜಿಲ್ಲಾ ಬಸವ ಜಯಂತಿ ಅಧ್ಯಕ್ಷರಾದ ಎಂ. ಬಿ ರಾಜಶೇಖರ್, ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು, ಆಯುಕ್ತ ಎಸ್. ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್. ಉದಯಕುಮಾರ, ಮುಖಂಡರುಗಳಾದ ಎಂ. ಗುರುಪ್ರಸಾದ್, ಎಲ್. ಸಂದೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!