Friday, September 20, 2024

ಪ್ರಾಯೋಗಿಕ ಆವೃತ್ತಿ

ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು: ಬಿ.ಆರ್.ರಾಮಚಂದ್ರು

ಶಾಲೆಗಳು ದೇವಸ್ಥಾನ ಇದ್ದ ಹಾಗೆ,ಮಕ್ಕಳು ದೇವರು ಸಮಾನರಾಗಿದ್ದು,ಮುಂದಿನಅವರ ವಿದ್ಯಾಭ್ಯಾಸಕ್ಕೆ ಶ್ರೀ ಶಂಭು ಸೇವಾ ಟ್ರಸ್ಟ್ ಅಗತ್ಯ ನೆರವು ನೀಡಲಾಗುವುದು ಎಂದು ಮನ್ ಮುಲ್ ಅಧ್ಯಕ್ಷ
ಬಿ.ಆರ್.ರಾಮಚಂದ್ರು ಹೇಳಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಗರದ ಹೊಸಹಳ್ಳಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್ ವಿತರಣೆ ಹಾಗೂ ಹೊಸಹಳ್ಳಿಯಿಂದ 3 ಬಸ್ ನಲ್ಲಿ ಧರ್ಮಸ್ಥಳಕ್ಕೆ ಹೊರಟ ಶಂಭು ಧರ್ಮಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಒಂದನೇ ತರಗತಿಯಿಂದ 10ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಂಭು ಸೇವಾ ಟ್ರಸ್ಟ್ ವತಿಯಿಂದ ಉಚಿತ ಬ್ಯಾಗುಗಳನ್ನು ವಿತರಣೆ ಮಾಡುತ್ತಿದ್ದೇನೆ ಎಂದರು.

ಈಗಾಗಲೇ ಮಂಡ್ಯ ತಾಲೂಕಿನಾದ್ಯಂತ ಶಂಭು ಧರ್ಮ ಯಾತ್ರೆಗೆ ಜನರನ್ನು ಕರೆದುಕೊಂಡು ಹೋಗಿ ಶಂಭು ಧರ್ಮ ಯಾತ್ರೆ ಮಾಡಿಸಲಾಗುತ್ತಿದೆ. ಎಲ್ಲರೂ ಗುಂಪಾಗಿ ಒಟ್ಟಿಗೆ ಸೇರಿ ಶಂಭು ಧರ್ಮ ಯಾತ್ರೆ ಮಾಡುವುದರಿಂದ ಸಂತೋಷವಾಗುತ್ತದೆ. ಯಾರು ಆತುರ ಮಾಡುವುದು ಬೇಡ. ಸಮಾಧಾನವಾಗಿ ಎಲ್ಲರಿಗೂ ಧರ್ಮದರ್ಶನ ಮಾಡಿಸಲಾಗುವುದು ಎಂದರು

ಧರ್ಮದರ್ಶನಕ್ಕೆ ತೆರಳುವವರಿಗೆ ಊಟ,ತಿಂಡಿ,ಕಾಫಿ,ವಸತಿ ಕಲ್ಪಿಸಿ ಮಂಜುನಾಥಸ್ವಾಮಿಯ ಧರ್ಮ ದರ್ಶನ ಮಾಡಿಸಿ ವಾಪಸ್ ಕರೆತರಲಾಗುವುದು, ಧರ್ಮಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿ ಮಹಿಳೆಯರನ್ನು ಧರ್ಮಸ್ಥಳಕ್ಕೆ ಕಳುಹಿಸಿಕೊಟ್ಟರು.

ಶಿಕ್ಷಣಕ್ಕಾಗಿ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಸವಲತ್ತುಗಳನ್ನು ಬಳಸಿಕೊಂಡು ಉನ್ನತವಾಗಿ ವ್ಯಾಸಂಗ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಹೆಚ್.ಎಸ್. ಮಂಜು, ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ನಗರಸಭಾ ಸದಸ್ಯೆ ಪವಿತ್ರ ಬೋರೇಗೌಡ, ಹೊಸಹಳ್ಳಿ ಮುಖಂಡರಾದ ಸುರೇಶ್, ಗುತ್ತಿಗೆದಾರ ಬಾಲರಾಜು, ಕೆಂಚನಹಳ್ಳಿ ಪುಟ್ಟಸ್ವಾಮಿ,ಶಂಭು ಸೇವಾ ಟ್ರಸ್ಟ್ ಕಾರ್ಯದರ್ಶಿ ಬಿ.ಆರ್.ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!