Saturday, May 18, 2024

ಪ್ರಾಯೋಗಿಕ ಆವೃತ್ತಿ

ಅಕ್ಷರ ಕಲಿಸಿದ ರಾಮೇಗೌಡ ಮೇಷ್ಟ್ರನ್ನು ಸ್ಮರಿಸಿದ ಸಚಿವ ಚಲುವರಾಯಸ್ವಾಮಿ !

“ಗುರುವಿನ ಗುಲಾಮನಾಗುವ ತನಕ ದೊರೆಯಾದಣ್ಣ” -ಪುರಂದರದಾಸರು ಸಾವಿರಾರು ವಿಧ್ಯಾರ್ಥಿಗಳಿಗೆ ಜೀವನದ ಮೌಲ್ಯಾಧಾರಿತ ಶಿಕ್ಷಣ ನೀಡಿ ಅವರ ಬಾಳಿಗೆ ಬೆಳಕು ಚಲ್ಲಿರುವ ಸಮಸ್ತ ಗುರುವೃಂದಕ್ಕೆ “ಶಿಕ್ಷಕರ ದಿನಾಚರಣೆ” ಹಾರ್ದಿಕ ಶುಭಾಶಯಗಳು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಮರಿಸಿದ್ದಾರೆ.

ದೇಶ ಕಂಡ ಅಪ್ರತಿಮ ಶಿಕ್ಷಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಹಾಗೂ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಪುಲೆ ಅವರುಗಳನ್ನು ನೆನೆಯುತ್ತ ಶಿಕ್ಷಕರ ದಿನಾಚರಣೆಯ ನಿಮಿತ್ತ ಇಂದು ನನ್ನ ಜೀವನದಲ್ಲಿ ಏಳಿಗೆಗೆ ಪಾತ್ರರಾಗಿರುವ ಎಲ್ಲಾ ಸಮಸ್ತ ಗುರುವೃಂದಕ್ಕು ನಮಿಸುತ್ತೇನೆ…..ಇದೆ ಸಂದರ್ಭದಲ್ಲಿ ನನಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ದಿವಂಗತ ರಾಮೇಗೌಡ ಮೇಷ್ಟ್ರು (ಬ್ರಹ್ಮದೇವರಹಳ್ಳಿ) ಅವರನ್ನು ಸ್ಮರಿಸುತ್ತ ಮತ್ತೊಮ್ಮೆ ಮೊದಲ ಗುರು ಅಮ್ಮನಿಗೆ, ಪ್ರಪಂಚದ ಜ್ಞಾನ ಕೊಟ್ಟ ಅಪ್ಪನಿಗೆ, ಅಕ್ಷರಜ್ಞಾನ ಕೊಟ್ಟ ಗುರುವಿಗೆ, ಶಿಕ್ಷಕರ ದಿನಾಚರಣೆಯ ಶುಭಕಾಮನೆಗಳನ್ನು ಕೋರುತ್ತೇನೆ ಎಂದು ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!